ಚನ್ನರಾಯಪಟ್ಟಣ: ಕಟ್ಟಡ ಕಾರ್ಮಿಕನ ಕಣ್ಣು ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಮಣಿಕಂಠ ಕುಟುಂಬ

ಚನ್ನರಾಯಪಟ್ಟಣ: ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ ನಾಗಯ್ಯನಕೊಪ್ಪಲು ಗ್ರಾಮದ ಮಣಿಕಂಠ (32 ವರ್ಷ) ಇತ್ತೀಚೆಗೆ ಮೃತಪಟ್ಟಿದ್ದು, ಅವರ ಪೋಷಕರು ಮೃತ ಮಗನ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ.

ಮೃತ ಮಣಿಕಂಠ ಕಟ್ಟಡ ಕಾರ್ಮಿಕನಾಗಿದ್ದು, ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕಾರಿ ಸದಸ್ಯರಾಗಿದ್ದರು. ಇವರ ಪೋಷಕರಾದ ಶ್ರೀನಿವಾಸ್ ಮತ್ತು ಯಶೋಧಮ್ಮ ಮೃತ ಮಗನ ಎರಡು ಕಣ್ಣುಗಳನ್ನು ಹಾಸನದ ಸರ್ಕಾರಿ ಆಸ್ಪತ್ರೆಯ ನೇತ್ರಾಲಯಕ್ಕೆ ದಾನ ಮಾಡಿರುತ್ತಾರೆ.