17.8 C
Munich
Home News safety issue:ಕೆ.ಆರ್.ಪುರಂ ಮಹಿಳಾ ಕಾಲೇಜು ಆವರಣದಲ್ಲಿ ಅನೈತಿಕ ಚಟುವಟಿಕೆ ಆರೋಪ; ವಿದ್ಯಾರ್ಥಿನಿಯರ ಸುರಕ್ಷತೆಗೆ ಕ್ರಮಕ್ಕೆ ಮನವಿ

safety issue:ಕೆ.ಆರ್.ಪುರಂ ಮಹಿಳಾ ಕಾಲೇಜು ಆವರಣದಲ್ಲಿ ಅನೈತಿಕ ಚಟುವಟಿಕೆ ಆರೋಪ; ವಿದ್ಯಾರ್ಥಿನಿಯರ ಸುರಕ್ಷತೆಗೆ ಕ್ರಮಕ್ಕೆ ಮನವಿ

ಕೆ.ಆರ್.ಪುರಂ ಬಡಾವಣೆಯ ನಿವಾಸಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವ ದೃಶ್ಯ
ವಿದ್ಯಾರ್ಥಿನಿಯರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಕೆ.ಆರ್.ಪುರಂ ನಿವಾಸಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಕಾಲೇಜು ಆವರಣಕ್ಕೆ ಬಲಿಷ್ಠ ಗೇಟ್, ಸೆಕ್ಯೂರಿಟಿ ಗಾರ್ಡ್, ಸಿಸಿಟಿವಿ ಹಾಗೂ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಕಲ್ಪಿಸುವಂತೆ ಕೆ.ಆರ್.ಪುರಂ ನಿವಾಸಿಗಳು ಮನವಿ ಸಲ್ಲಿಸಿದರು.

ಕೆ.ಆರ್.ಪುರಂ ಗಂಧದಕೋಟೆ ಪಾರ್ಕ್ ಹಾಗೂ ಸರ್ಕಾರಿ ಮಹಿಳಾ ಕಾಲೇಜುಗಳ ಆವರಣದಲ್ಲಿ ನಡೆಯುತ್ತಿರುವ ಅನೈತಿಕ ಮತ್ತು ಅಸಭ್ಯ ಚಟುವಟಿಕೆಗಳನ್ನು ತಡೆದು, ವಿದ್ಯಾರ್ಥಿನಿಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆ.ಆರ್.ಪುರಂ ಬಡಾವಣೆಯ ನಿವಾಸಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಪ್ರದೇಶದಲ್ಲಿ ಮಹಿಳಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾಲೇಜು ಆವರಣ ಹಾಗೂ ಸುತ್ತಮುತ್ತ ಪುಂಡ–ಪೋಕರಿಗಳ ಓಡಾಟ, ಬೈಕ್–ಕಾರ್‌ಗಳಲ್ಲಿ ಅತಿವೇಗ, ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಅಸಭ್ಯ ವರ್ತನೆ, ಗಾಂಜಾ ಸೇವನೆ, ಮದ್ಯಪಾನ ಸೇರಿದಂತೆ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಕಾಲೇಜು ಆವರಣಕ್ಕೆ ಸೂಕ್ತ ಗೇಟ್ ಹಾಗೂ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ಆವರಣವನ್ನು ರಸ್ತೆಯಂತೆ ಬಳಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನಿವಾಸಿಗಳು ಕಾಲೇಜು ಆವರಣಕ್ಕೆ ಬಲಿಷ್ಠ ಗೇಟ್ ಅಳವಡಿಕೆ, ಅನಗತ್ಯ ಸಾರ್ವಜನಿಕ ಪ್ರವೇಶ ನಿಷೇಧ, ಶಾಶ್ವತ ಸೆಕ್ಯೂರಿಟಿ ಗಾರ್ಡ್ ನೇಮಕ, ಪೊಲೀಸ್ ಪೆಟ್ರೋಲಿಂಗ್, ಸಿಸಿಟಿವಿ ನಿಗಾವ್ಯವಸ್ಥೆ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮನವಿಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು, ಡಿಡಿಪಿಯು ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಜಯೇಂದ್ರ ಕುಮಾರ್ ಜೈನ್, ತಿರುನಾರಾಯಣ ಅಯ್ಯಂಗಾರ್, ದಿನಕರ್, ಶೇಖರಣ್ಣ, ಮಹೇಶ್, ವಾಸು, ಕಲಾ ಕಾಲೇಜಿನ ಮಾಜಿ ಪ್ರಾಂಶುಪಾಲ ಮಹೇಂದ್ರಣ್ಣ, ಮಾಜಿ ನಗರಸಭೆ ಸದಸ್ಯ ಸಂತೋಷ್, ಪ್ರಶಾಂತ್, ವಿನಯ್, ಪವನ್, ಸಂದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!