📍 ಕೋಲಾರ, ಏಪ್ರಿಲ್,23,2026(www.kannadapost.com): ‘ಛಲವೊಂದಿದ್ದರೆ ಸಾಕು, ಎಂತಹ ಕಷ್ಟಗಳನ್ನೂ ಮೆಟ್ಟಿ ನಿಲ್ಲಬಹುದು’ ಎಂಬುದಕ್ಕೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕುಸುಮಾ ಜೀವಂತ ಉದಾಹರಣೆಯಾಗಿದ್ದಾರೆ.
ತೀವ್ರ ಅನಾರೋಗ್ಯದ ನಡುವೆಯೂ ಸ್ಟ್ರೆಚರ್ ಮೇಲೆ ಮಲಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಕುಸುಮಾ, ಇದೀಗ ಪ್ರಕಟವಾದ ಫಲಿತಾಂಶದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
💔 ನೋವಿನಲ್ಲೂ ಬಗ್ಗದ ಧೈರ್ಯ:
ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿಯ ನಿವಾಸಿಯಾಗಿರುವ ಕುಸುಮಾ, ಪರೀಕ್ಷೆಯ ಸಮಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರೂ, ತನ್ನ ಕನಸನ್ನು ಕೈಬಿಡದೇ ಪರೀಕ್ಷೆ ಬರೆಯಲು ತೀರ್ಮಾನಿಸಿದರು.
ಪ್ರತಿದಿನ ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದ ಆಕೆಯನ್ನು, ಸ್ಟ್ರೆಚರ್ ಮೇಲೆಯೇ ಪರೀಕ್ಷಾ ಕೊಠಡಿಗೆ ಕರೆದೊಯ್ಯಲಾಗುತ್ತಿತ್ತು. ಬೆನ್ನುನೋವು ಹಾಗೂ ದೈಹಿಕ ಯಾತನೆ ನಡುವೆಯೂ ಪರೀಕ್ಷೆ ಎದುರಿಸಿದ್ದ ದೃಶ್ಯ ಎಲ್ಲರ ಮನಸ್ಸು ಮುಟ್ಟಿತ್ತು.
🏆 ಪರಿಶ್ರಮಕ್ಕೆ ದೊರೆತ ಫಲ:
ಇಂದು ಪ್ರಕಟವಾದ ಫಲಿತಾಂಶದಲ್ಲಿ ಕುಸುಮಾ 625 ಅಂಕಗಳಿಗೆ 374 ಅಂಕಗಳನ್ನು ಪಡೆದು ‘ಫಸ್ಟ್ ಕ್ಲಾಸ್’ ನಲ್ಲಿ ಪಾಸ್ ಆಗಿದ್ದಾರೆ.
ಆರೋಗ್ಯ ಸಮಸ್ಯೆ ನಡುವೆಯೂ ಈ ಸಾಧನೆ ಮಾಡಿದ ಕುಸುಮಾ, ರಾಜ್ಯದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ.
🏥 ಚಿಕಿತ್ಸೆ ಮುಂದುವರಿಕೆ:
ಪ್ರಸ್ತುತ ಕುಸುಮಾ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನ ಯಶಸ್ಸಿನ ಸುದ್ದಿ ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ.

📍 Kolar, April 23, 2026:
Proving that determination can overcome any obstacle, Kusuma from KGF taluk in Kolar district has emerged as a true inspiration.
Despite severe illness, she appeared for the SSLC examination lying on a stretcher and has now passed with First Class, drawing attention across the state.
💪 Courage Beyond Pain:
Kusuma, a resident of Chinnanagahalli in KGF taluk, was suffering from serious health issues during her exams. Unable to even stand, she chose not to give up on her academic year.
She was brought to the exam centre daily in an ambulance and taken into the hall on a stretcher. Battling pain and discomfort, she completed her exams with determination.
🏆 Result of Hard Work:
In the results announced today, Kusuma scored 374 out of 625 marks, securing a First Class.
Her achievement stands as a powerful inspiration to students across Karnataka.
🏥 Current Status:
Kusuma is currently undergoing treatment at a hospital in Whitefield, Bengaluru, and expressed happiness upon hearing her result.











