13.4 C
Munich
Home News Kodagu:ಕೊಡಗು:ದುಬಾರೆ ಶಿಬಿರದಲ್ಲಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಚಿಕಿತ್ಸೆ ಫಲಿಸದೆ ಸಾವು

Kodagu:ಕೊಡಗು:ದುಬಾರೆ ಶಿಬಿರದಲ್ಲಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಚಿಕಿತ್ಸೆ ಫಲಿಸದೆ ಸಾವು

ದುಬಾರೆ ಆನೆ ಶಿಬಿರದಲ್ಲಿ ಮೃತಪಟ್ಟ ಮಾರ್ತಾಂಡ ಆನೆ
ಕಂಜನ್ ಆನೆಯ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ದುಬಾರೆ ಶಿಬಿರದ ಮಾರ್ತಾಂಡ ಆನೆ

ಕೊಡಗು(Kodagu) ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಕಂಜನ್ ಆನೆಯ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ನಿನ್ನೆ ನಡೆದ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬರೂ ಸಾವನ್ನಪ್ಪಿದ್ದರು.

ಕೊಡಗು,ಮೇ,19,2026(www.kannadapost.com): ನಿನ್ನೆ ಕೊಡಗು ಜಿಲ್ಲೆ ಕುಶಾಲನಗರದ ದುಬಾರೆ ಆನೆ ಶಿಬಿರದಲ್ಲಿ ಸ್ನಾನ ಮಾಡುವ ವೇಳೆ ಕಂಜನ್ ಆನೆ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ. ನಿನ್ನೆ ಸ್ನಾನ ಮಾಡುವ ವೇಳೆ ಕಂಜನ್ ಆನೆ ಮತ್ತು ಮಾರ್ತಾಂಡ ಆನೆ ನಡುವೆ ಕಾದಾಟ ನಡೆಸಿದ್ದವು. ಈ ವೇಳೆ ಆನೆಗಳ ಅಡಿಗೆ ಸಿಲುಕಿದ್ದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಸಾವನ್ನಪ್ಪಿದ್ದರು.

ಹಾಗೆಯೇ ಕಂಜನ್ ಆನೆ ದಾಳಿಯಿಂದ ಮರ್ತಾಂಡ ಆನೆಯ ಹೊಟ್ಟೆ ಕಿವಿ ಹಿಂಭಾಗಕ್ಕೆ ಕಾಲಿಗೆ ಗಾಯವಾಗಿತ್ತು. ನಂತರ ದುಬಾರೆ ಶಿಬಿರದಲ್ಲಿ ಮಾರ್ತಾಂಡಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಮಾರ್ತಾಂಡ ಆನೆ ಮೃತಪಟ್ಟಿದೆ.

error: Content is protected !!