ಬೃಹತ್‌ ಗಾತ್ರದ ಕಾಳಿಂಗ ಸರ್ಪ ರಕ್ಷಣೆ

ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾ. ಮಾರನಹಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಲಾಯಿತು.

ಗ್ರಾಮದ ಜಾರ್ಜ್ ಎಂಬುವರ ತೋಟದಲ್ಲಿ ಕಾಣಿಸಿಕೊಂಡ ಕಾಳಿಂಗ ಸುಮಾರು ಎಂಟು ಅಡಿ ಉದ್ದವಿತ್ತು. ಉರಗ ಪ್ರೇಮಿ ಮೊಹಮ್ಮದ್‌ ದಸ್ತಗಿರ್ ಅವರು ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು. ಕಾಳಿಂಗ ಪ್ರತ್ಯಕ್ಷದಿಂದ ಗ್ರಾಮಸ್ಥರು ಕೆಲಕಾಲ ಗಾಬರಿಗೊಂಡಿದ್ದರು.