ಕಾಡಿಗೆ ಮರಳದ ಅಂಧ ಕಡವೆ

ಸಕಲೇಶಪುರ: ತಾಲ್ಲೂಕಿನ ಮಲ್ಲಗದ್ದೆ ಗ್ರಾಮದಲ್ಲಿ ಕಣ್ಣು ಕಾಣದೆ ಗಾಯಗೊಂಡಿರುವ ಕಡವೆಯೊಂದು ಪರದಾಡಿರುವುದೆ ಮಲಕಲಕಿಸಿದೆ.

ಮಲ್ಲಗದ್ದೆ ಗ್ರಾಮದ ಹೊರವಲಯದಲ್ಲಿ ನಾಲ್ಕು ದಿನಗಳಿಂದ ಕಡವೆ ಬೀಡುಬಿಟ್ಟಿದ್ದ ಕಡವೆಯ ಕಣ್ಣುಗಳಿಗೆ ಗಾಯವಾಗಿದೆ. ಎರಡು ಕಣ್ಣೂ ಕಾಣಿಸದ ಕಾರಣ ಅರಣ್ಯದೊಳಗೆ ಹೋಗಲಾಗದೆ ಒಂದೇ ಕಡೆ ನಿಂತು ಓಡಾಡುತ್ತಾ ನರಳಾಡುತ್ತಿದೆ.
ಆಹಾರ ನೀರು ಇಲ್ಲದೆ ಬಯಲು ಪ್ರದೇಶದಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತಿದೆ. ಕಡವೆಯ ಮೂಕರೋದನೆ ಅನುಭವಿಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕೂಡಲೇ ಕಡವೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಮನವಿ ಮಾಡಿದ್ದಾರೆ.