ಹಿರೀಸಾವೆ: ಎನ್.ಗಂಗಾಧರ್ ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಹಿರೀಸಾವೆಯ ಕಾರ್ತಿಕ್ ಪಬ್ಲಿಕ್ ಶಾಲೆಯು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಬಾಲಕರ ವಿಭಾಗದಲ್ಲಿ ೧೦೦ ಮೀಟರ್ ಓಟ ಪ್ರಥಮ, ೨೦೦ ಮೀ. ಪ್ರಥಮ, ೪೦೦ ಮೀ. ತೃತೀಯ, ೪*೧೦೦ ರಿಲೇ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಎತ್ತರ ಜಿಗಿತ-ಪ್ರಥಮ ಮತ್ತು ತೃತೀಯ, ಗುಂಡು ಎಸೆತ ಪ್ರಥಮ, ತಟ್ಟೆ ಎಸೆತ ದ್ವಿತೀಯ, ಕಬಡ್ಡಿ ಪ್ರಥಮ, ಥ್ರೋ ಬಾಲ್ ಪ್ರಥಮ ಹಾಗೂ ವಾಲಿಬಾಲ್ ದ್ವಿತೀಯ ಸ್ಥಾನ ಪಡೆದಿದೆ.
ಇನ್ನು ಬಾಲಕರ ವಿಭಾಗದಲ್ಲಿ ೮ ನೇ ತರಗತಿಯ ಮೋಹಿತ್ ಕುಮಾರ್ ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಬಾಲಕಿಯರ ವಿಭಾಗದಲ್ಲಿ ೬೦೦ ಮೀ. ಓಟದಲ್ಲಿ ತೃತೀಯ, ೪*೧೦೦ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ತಟ್ಟೆ ಎಸೆತ ದ್ವಿತೀಯ ಮತ್ತು ತೃತೀಯ, ಗುಂಡು ಎಸೆತ ತೃತೀಯ, ವಾಲಿಬಾಲ್ ಪ್ರಥಮ, ಕಬಡ್ಡಿ ಪ್ರಥಮ ಹಾಗೂ ಥ್ರೋ ಬಾಲ್ ದ್ವಿತೀಯ ಸ್ಥಾನಗಳಿಸಿದ್ದಾರೆ.
ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪುಟ್ಟರಾಜು ಹಾಗೂ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಶುಕ್ರವಾರ ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಅನಂತ ಕೃಷ್ಣಮೂರ್ತಿ, ಕಾರ್ಯದರ್ಶಿ ರೇಣುಕಾ ದೇವಿ, ಮುಖ್ಯಶಿಕ್ಷಕ ಚೇತನ್ ಕುಮಾರ್ ಬಿ.ಸಿ. ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.










