ಹೊಳೆನರಸೀಪುರ: ಪಟ್ಟಣದ ಬಳೆಗಾರರ ಬೀದಿಯ ಶ್ರೀ ಶನಿದೇವರ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.
ವಿಶ್ವಾವಸು ನಾಮಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣಮಾಸದ ಶುಕ್ಲ ಪಕ್ಷದ ಶನಿವಾರ ಮುಂಜಾನೆ ಬ್ರಾಹ್ಮ ಮಹೂರ್ತದ ವಿಸಾಖ ನಕ್ಷತ್ರದಲ್ಲಿ ಪಂಚಾಮೃತ ಅಭಿಷೇಕ, ತೈಲಮಜ್ಜನ ನಂತರ ವಿಶೇಷ ಅಲಂಕಾರ, ಸಹಸ್ರ ನಾಮಾರ್ಚನೆ, ಅಷ್ಟೋತ್ತರ ಸೇವೆ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗಿತ್ತು. ಹಿರಿಯ ಅರ್ಚಕರಾದ ಎಚ್.ಜೆ.ಗೋವಿಂದರಾಜು ನೇತೃತ್ವದಲ್ಲಿ ಎಚ್.ಕೆ.ಹೇಮಂತಕುಮಾರ್ ಪೂಜಾ ಕೈಂಕರ್ಯ ನೆರವೇರಿಸಿದರು.










