10.3 C
Munich
Home ಕ್ರೈಮ್‌ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ: ಮೇಘಾಲಯ ಮೂಲದ ಯುವಕ ಸ್ಥಳದಲ್ಲೇ ಸಾವು — ನಾಗಮಂಗಲದಲ್ಲಿ ದುರಂತ

ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ: ಮೇಘಾಲಯ ಮೂಲದ ಯುವಕ ಸ್ಥಳದಲ್ಲೇ ಸಾವು — ನಾಗಮಂಗಲದಲ್ಲಿ ದುರಂತ

In a horrific accident that occurred late Tuesday night in the heart of Nagamangala town, a bike rider died on the spot. The accident happened when a speeding goods vehicle collided with the bike.

ಮಂಡ್ಯ: ನಾಗಮಂಗಲ ಪಟ್ಟಣದ ಹೃದಯಭಾಗದಲ್ಲಿ ಮಂಗಳವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವೇಗವಾಗಿ ಬಂದ ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತನನ್ನು ಮೇಘಾಲಯ ಮೂಲದ ಕೂಲಿ ಕಾರ್ಮಿಕ ಗಣೇಶ್ (25) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಟಿಬಿ ಸರ್ಕಲ್ ನಿಂದ ಮಂಡ್ಯ ಸರ್ಕಲ್ ಕಡೆಗೆ ಬರುತ್ತಿದ್ದ ಗಣೇಶ್ ಬೈಕ್‌ಗೆ, ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನ ರಸ್ತೆ ವಿಭಜಕಕ್ಕೆ ತಾಗಿದ ನಂತರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಬೈಕ್ ಹಾಗೂ ಹತ್ತಿರದಲ್ಲಿದ್ದ ಕಾರು ಕೂಡ ಜಖಂಗೊಂಡಿವೆ.

ಗೂಡ್ಸ್ ವಾಹನದಲ್ಲಿ ಚಾಲಕನ ಜೊತೆಯಲ್ಲಿ ಇದ್ದ ಅಫ್ತಬ್ ಪಾಷ ಎಂಬುವವರಿಗೆ ಸಣ್ಣ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ತೀವ್ರತೆ ತಿಳಿಯುತ್ತಿದ್ದಂತೆ ನಾಗಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

— ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್, ಮಂಡ್ಯ

error: Content is protected !!