ಹೊಳೆನರಸೀಪುರ: ಹೊಳೆನರಸೀಪುರ ತಾಲೂಕು ಗಮಕ ಪರಿಷತ್ ಅಧ್ಯಕ್ಷರಾಗಿ ಶ್ರೀನಿವಾಸ್ ರವಿರಾಮನ್ ಆಯ್ಕೆ

ಹೊಳೆನರಸೀಪುರ: ಕರ್ನಾಟಕ ಗಮಕ ಕಲಾಪರಿಷತ್‌ನ ಹೊಳೆನರಸೀಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನಿವೃತ್ತ ಅಭಿಯಂತರರಾದ ಶ್ರೀನಿವಾಸ್ ರವಿರಾಮನ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಾಸನ ಜಿಲ್ಲಾ ಘಟಕದ ಅಧ್ಯಕ್ಷರೂ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷರೂ ಆದ ಕರ್ನಾಟಕ ಕಲಾಶ್ರೀ ಗಣೇಶ್ ಉಡುಪ ಅವರು ಸರ್ವಾನುಮತದ ಆಧಾರದಲ್ಲಿ ಈ ಆಯ್ಕೆಯನ್ನು ಪ್ರಕಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗಮಕ ಪರಿಷತ್‌ನ ಇತರೆ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಗಿದ್ದು, ಗೌರವ ಅಧ್ಯಕ್ಷರಾಗಿ ಪುರಸಭೆಯ ಮಾಜಿ ಸದಸ್ಯ ಹಾಗೂ ಸಮಾಜಸೇವಕರಾದ ಬಾ.ರಾ. ಸುಬ್ಬರಾಯರು, ಉಪಾಧ್ಯಕ್ಷರಾಗಿ ರಾಮಪ್ರಕಾಶ್ ಕಾರಂತ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್. ವಿಜಯಕುಮಾರ್,
ಸಹ ಕಾರ್ಯದರ್ಶಿಯಾಗಿ ಗಮಕ ವಿದುಷಿಯಾದ ಹೆಚ್.ಎನ್. ನೇತ್ರಾ, ಕೋಶಾಧಿಕಾರಿಯಾಗಿ ರೂಪಾ ಮಂಜುನಾಥ್ ಅವರು ಆಯ್ಕೆಯಾಗಿದ್ದಾರೆ.

ಗಮಕ ಕಲೆಯ ಸಂರಕ್ಷಣೆ, ವಿಸ್ತರಣೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ನೂತನ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.