14.6 C
Munich
Home ಜಿಲ್ಲೆ ಹಾಸನ: ಸ್ಕಾಲರ್ಸ್ ಶಾಲೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ

ಹಾಸನ: ಸ್ಕಾಲರ್ಸ್ ಶಾಲೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ

ಹಾಸನ, ನವೆಂಬರ್ : ನಗರದ ಸ್ಕಾಲರ್ಸ್ ಶಾಲೆಯಲ್ಲಿ ಮಂಗಳವಾರ  ಉಜಿರೆಯ ಎಸ್‌.ಡಿ.ಎಂ. ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ವೈದ್ಯರಾದ  ಭಾವನಾ ಮತ್ತು ಲಹರಿ ಅನಂತು ಅವರ ನೇತೃತ್ವದಲ್ಲಿ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು..

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಹ ನ್ಯಾಚುರೋಪತಿ, ಯೋಗ, ಪ್ರಾಣಾಯಾಮ, ಆಕ್ಯೂಪಂಕ್ಚರ್ ಮತ್ತು ಹೆಣ್ಣು ಮಕ್ಕಳ ಋತುಚಕ್ರದ ಬಗ್ಗೆ ಮಾಹಿತಿ ಹಾಗೂ ಸಲಹೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಗ್ಯಕರ ಜೀವನಶೈಲಿಯ ಅಗತ್ಯವನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದರು.

ಶಾಲೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್, ಆಡಳಿತಾಧಿಕಾರಿ ಡಾ. ಎಚ್. ಎನ್. ಚಂದ್ರಶೇಖರ್, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!