🛑 HASSAN – BREAKING NEWS 🛑 ಹಾಸನ : ಹಾಸನಾಂಬ ದೇವಿ ದರ್ಶನ ಪಡೆದು ವಾಪಾಸ್ ಹೋಗುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು! 🚨

Hassan: Two youths died on the spot in a tragic accident that took place on Saturday afternoon near Kaggalikavalu Forest in Channarayapatna taluk.

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ಶನಿವಾರ ಮಧ್ಯಾಹ್ನ ನಡೆದ ದುರಂತ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

➡️ ಹಾಸನಾಂಬ ದೇವಿ ದರ್ಶನ ಪಡೆದು ವಾಪಾಸ್ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
➡️ ಎರಡು ಬೈಕ್‌ಗಳಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು, ಘಟನೆ ಭೀಕರವಾಗಿತ್ತು.
➡️ ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದೆ.

ಮೃತ ಬಸವರಾಜ್ ಮತ್ತು ಅನು

💐 ಮೃತರು:

  • ಬಸವರಾಜು
  • ಅನು (19)

💔 ಗಾಯಾಳುಗಳು:

  • ಛಾಯಾ (20) – ಐಸಿಯುನಲ್ಲಿ ಚಿಕಿತ್ಸೆ
  • ಮೊಹಮ್ಮದ್ ಶಾಹಿದ್ – ಗಂಭೀರ ಗಾಯ

🚓 ಘಟನೆಯ ವಿವರ:
ಬೆಂಗಳೂರು ಮೂಲದ ಬಸವರಾಜು, ಅನು ಮತ್ತು ಛಾಯಾ ಯಮಹಾ ಬೈಕ್‌ನಲ್ಲಿ ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದರು.
ಇವರ ಮುಂದೆ ಆ್ಯಕ್ಟಿವಾ ಹೋಂಡಾದಲ್ಲಿ ಮೊಹಮ್ಮದ್ ಶಾಹಿದ್ ಬರುತ್ತಿದ್ದಾಗ, ಚನ್ನರಾಯಪಟ್ಟಣ ಕಡೆಯಿಂದ ವೇಗವಾಗಿ ಬಂದ KA-13 P-1521 ನಂಬರ್‌ನ ಇನ್ನೋವಾ ಕಾರು ಮೊದಲು ಆ್ಯಕ್ಟಿವಾಗೆ ಮತ್ತು ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ.

⚠️ ಡಿಕ್ಕಿಯ ತೀವ್ರತೆಯಿಂದ ಬಸವರಾಜು ಹಾಗೂ ಅನು ಸ್ಥಳದಲ್ಲೇ ಸಾವನ್ನಪ್ಪಿದ್ದು, ಛಾಯಾ ಮತ್ತು ಶಾಹಿದ್ ಗಂಭೀರ ಗಾಯಗೊಂಡಿದ್ದಾರೆ.

👮‍♂️ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

🙏 ಹಾಸನಾಂಬ ದೇವಿ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಭಕ್ತರ ಕುಟುಂಬಕ್ಕೆ ಈ ದುರಂತವು ಆಘಾತ ತಂದಿದೆ.