ಹಾಸನ: ಮೂರು ವರ್ಷ ನಾಲ್ಕು ತಿಂಗಳ ವಯಸ್ಸಿನಲ್ಲೇ ಚಿತ್ರಕಲಾ ಲೋಕದಲ್ಲಿ ಅದ್ಭುತ ಸಾಧನೆ ತೋರಿಸಿರುವ ಡಿಂಪನಾ ಎಸ್. ದೇಸಾಯಿ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಆಯ್ಕೆಯಾಗಿದ್ದಾರೆ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯ ಚಿತ್ರ ಕಲಾವಿದ ಬಿ.ಎಸ್ ದೇಸಾಯಿ ಅವರು ತಿಳಿಸಿದರು.
ಅತ್ಯಂತ ಕಿರಿಯ ವಯಸ್ಸಿನಲ್ಲಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ ಕಲಾವಿದೆ ಎಂಬ ಗೌರವಕ್ಕೆ ಡಿಂಪನಾ ಭಾಜನರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಾಸನದ ಕಲಾಶ್ರೀ ಗ್ಯಾಲರಿಯಲ್ಲಿ ಇತ್ತೀಚೆಗೆ ನಡೆದ ಕಲಾ ಪ್ರದರ್ಶನದಲ್ಲಿ ಡಿಂಪನ 350 ಕೃತಿಗಳ ಪೈಕಿ 70 ಅಯ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಬಣ್ಣಗಳ ಸಹಜ ಬಳಕೆ, ವಿಶಿಷ್ಟ ಆಕರಗಳು, ನೀಲಿ ಹಿನ್ನಲೆಯಲ್ಲಿ ಹಕ್ಕಿ-ಮರ-ನದಿ-ನೃತ್ಯತ್ಯಕ ಆಕೃತಿಗಳ ಸಂಯೋಜನೆಗಳು ಈ ಬಾಲಕಲಾವಿದೆಯ ಕಲ್ಪನಾ ಸಾಮರ್ಥ್ಯವನ್ನು ಸ್ಪಷ್ಟಪಡಿಸಿವೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಈಶಯ ಮುಕ್ತ ಕಲಾಭಿವ್ಯಕ್ತಿ ಮತ್ತು ಸೃಜನಾತ್ಮಕ ವೈಚಿತ್ರ್ಯವನ್ನು ಪರಿಗಣಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ, ಡಿಂಪನ ಸಾಧನೆಯನ್ನು ಅಧಿಕೃತವಾಗಿ ದಾಖಲಿಸಿ 1BR Achiever ಗೌರವವನ್ನು ನೀಡಿ ಪುರಸ್ಕರಿಸಿದೆ ಎಂದು ತಿಳಿಸಿದರು.
ಡಿಂಪನಾ ಹಾಸನ ಮೂಲದ ಕಲಾವಿದ ಕುಟುಂಬದಿಂದ ಬಂದವರು ಎಂದರು. ಬಾಲಕಲಾವಿದೆಯ ಈ ಸಾಧನೆಯನ್ನು ಚಿತ್ತಲಾ ಫೌಂಡೇಶನ್, ಹಾಸನ ಸೇರಿದಂತೆ ಕಲಾರಸಿಕರು ಹರ್ಷೋದ್ದಾರದಿಂದ ಸ್ವಾಗತಿಸಿದ್ದಾರೆ.
ಸುದ್ದಿಗೋಷ್ಠಿಯಾಲ್ಲಿ ಶಶಿಕಿರಣ್ ದೇಸಾಯಿ ಬಿ. ಶಶಿಕಲಾ ಜಾನಪದ ಕೌದಿ ಕಲಾವಿದೆ ಹಾಗೂ ಇತರರು ಉಪಸ್ಥಿತರಿದ್ದರು.










