15.2 C
Munich
Home ಕ್ರೈಮ್‌ ಹಾಸನ: ಹಾಸನಾಂಬೆ ದರ್ಶನದ ಗೋಲ್ಡ್ ಕಾರ್ಡ್ ಸ್ಕ್ಯಾನ್ ಮಾಡದೆ ಭಕ್ತರನ್ನು ಒಳಗೆ ಬಿಟ್ಟ ನಾಲ್ವರು ಕಂದಾಯ...

ಹಾಸನ: ಹಾಸನಾಂಬೆ ದರ್ಶನದ ಗೋಲ್ಡ್ ಕಾರ್ಡ್ ಸ್ಕ್ಯಾನ್ ಮಾಡದೆ ಭಕ್ತರನ್ನು ಒಳಗೆ ಬಿಟ್ಟ ನಾಲ್ವರು ಕಂದಾಯ ಇಲಾಖೆ ನೌಕರರನ್ನು ಸಸ್ಪೆಂಡ್ ಮಾಡಿದ ಡಿಸಿ!

ಹಾಸನಾಂಬ ದರ್ಶನೋತ್ಸವದ ನಿಯಮಗಳ ಜಾರಿಯಲ್ಲಿ ಶೂನ್ಯ ಸಹನೆ ನೀತಿ ಅಳವಡಿಸಿಕೊಂಡಿರುವ ಡಿಸಿ ಲತಾಕುಮಾರಿ ನಾಲ್ವರು ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಿ ಖಡಕ್ ಸಂದೇಶ ರವಾನಿಸಿದ್ದಾರೆ.

ಹಾಸನ : ಹಾಸನಾಂಬೆ ಜಾತ್ರಾ ಮಹೋತ್ಸವದ ವೇಳೆ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ನಾಲ್ವರು ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ.

ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ಒಳಗೆ ಬಿಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಾಗಿದೆ.

ಅಮಾನತುಗೊಂಡವರು –
🔹 ರಾಜಸ್ವ ನಿರೀಕ್ಷಕರು (ಆರ್‌ಐ) : ಗೋವಿಂದರಾಜ್ ಹಾಗೂ ಯೋಗಾನಂದ್
🔹 ಗ್ರಾಮ ಲೆಕ್ಕಾಧಿಕಾರಿಗಳು (ವಿಎ) : ಸಂತೋಷ್ ಅಂಬಿಗರ ಹಾಗೂ ಶಿರಾಜ್ ಮಹಿಮಾ ಪಟೇಲ್

ಈ ನಾಲ್ವರನ್ನು ತಕ್ಷಣದಿಂದ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗಮನಾರ್ಹವೆಂದರೆ, ಮೊದಲ ದಿನವೂ ಕರ್ತವ್ಯ ಐಡಿ ಕಾರ್ಡ್ ದುರುಪಯೋಗ ಪ್ರಕರಣದಲ್ಲಿ ಇಬ್ಬರು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು.

ಜಾತ್ರಾ ಸಂದರ್ಭದಲ್ಲಿ ಕರ್ತವ್ಯ ಪಾಲನೆಯಲ್ಲಿ ಬೇಜವಾಬ್ದಾರಿತನ ತೋರಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ಲತಾಕುಮಾರಿ ಎಚ್ಚರಿಕೆ ನೀಡಿದ್ದಾರೆ.

– ಕನ್ನಡಪೋಸ್ಟ್  ನ್ಯೂಸ್ ನೆಟ್ವರ್ಕ್, ಹಾಸನ

error: Content is protected !!