14.4 C
Munich
Home News ತಾಯಿ ಮಡಿಲಲ್ಲಿದ್ದಾಗಲೇ ತಲೆಯ ಮೇಲೆ ಬಿದ್ದ ತೆಂಗಿನಕಾಯಿ: ಉಡುಪಿಯಲ್ಲಿ ಒಂದೂವರೆ ವರ್ಷದ ಮಗು ದಾರುಣ ಸಾವು

ತಾಯಿ ಮಡಿಲಲ್ಲಿದ್ದಾಗಲೇ ತಲೆಯ ಮೇಲೆ ಬಿದ್ದ ತೆಂಗಿನಕಾಯಿ: ಉಡುಪಿಯಲ್ಲಿ ಒಂದೂವರೆ ವರ್ಷದ ಮಗು ದಾರುಣ ಸಾವು

ಉಡುಪಿ ಜಿಲ್ಲೆಯ ಹೆರಂಜಾಲು ಗ್ರಾಮದಲ್ಲಿ ತೆಂಗಿನಕಾಯಿ ಬಿದ್ದು ಮೃತಪಟ್ಟ ಒಂದೂವರೆ ವರ್ಷದ ಮಗುವಿನ ಘಟನೆ ನಡೆದ ಸ್ಥಳದ ಸಾಂದರ್ಭಿಕ ಚಿತ್ರ
ತಾಯಿ ಮಡಿಲಲ್ಲಿದ್ದಾಗಲೇ ತಲೆಯ ಮೇಲೆ ಬಿದ್ದ ತೆಂಗಿನಕಾಯಿ; ಉಡುಪಿಯಲ್ಲಿ ಒಂದೂವರೆ ವರ್ಷದ ಮಗು ಸಾವು

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆರಂಜಾಲು ಗ್ರಾಮದಲ್ಲಿ ತಾಯಿ ಮಡಿಲಲ್ಲಿದ್ದ ಒಂದೂವರೆ ವರ್ಷದ ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

ಉಡುಪಿ, ಜೂನ್ 11(www.kannadapost.com): ತಾಯಿ ಮಡಿಲಲ್ಲಿದ್ದ ಒಂದೂವರೆ ವರ್ಷದ ಮಗುವಿನ ತಲೆಯ ಮೇಲೆ ಅಚಾನಕ್ ಆಗಿ ತೆಂಗಿನಕಾಯಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆರಂಜಾಲು ಗ್ರಾಮದಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ತಾಯಿ ಮನೆಯ ಸಮೀಪ ಮಗುವನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದ ವೇಳೆ ಏಕಾಏಕಿ ಮರದಿಂದ ಬಿದ್ದ ತೆಂಗಿನಕಾಯಿ ಮಗುವಿನ ತಲೆಗೆ ಬಡಿದಿದೆ. ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡಿದೆ.

ಘಟನೆಯ ಬಳಿಕ ಸ್ಥಳೀಯರ ಸಹಾಯದಿಂದ ಮಗುವನ್ನು ತಕ್ಷಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ಮಗುವಿನ ಸ್ಥಿತಿ ಚಿಂತಾಜನಕವಾಗಿಯೇ ಉಳಿದಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಂದಮ್ಮ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಅಪರೂಪದ ಈ ದುರಂತದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದು, ಮನೆಗಳ ಸುತ್ತಮುತ್ತಲಿನ ಎತ್ತರದ ತೆಂಗಿನ ಮರಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

error: Content is protected !!