ಹಾಸನದ ಪತ್ರಕರ್ತೆ ಮಾಲಾ ಹಾಸನ ಅವರಿಗೆ ‘ಕುವೆಂಪುಶ್ರೀ’ ಪ್ರಶಸ್ತಿ

Hassan-based journalist Mala Hassan has been selected for the "Kuvempushree" award presented by the Buddha-Basava-Gandhi Cultural Trust (R).

ಹಾಸನ: ಬುದ್ಧ–ಬಸವ–ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ). ವತಿಯಿಂದ ನೀಡಲಾಗುವ “ಕುವೆಂಪುಶ್ರೀ” ಪ್ರಶಸ್ತಿಗೆ ಹಾಸನದ ಪತ್ರಕರ್ತೆ ಮಾಲಾ ಹಾಸನ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯನ್ನು ಫೆ. 8, 2026ರಂದು ನಡೆಯಲಿರುವ ರಾಜ್ಯ ಮಟ್ಟದ 10ನೇ ಯುವಜನ ಸಾಹಿತ್ಯ–ಸಂಸ್ಕೃತಿ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು.

ಸಮಾರಂಭವು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ. ಸಮಾರಂಭದ ಸರ್ವಾಧ್ಯಕ್ಷರಾಗಿ ಡಾ. ಎಂ.ಆರ್.ಉಪೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.

Hassan-based journalist Mala Hassan has been selected for the “Kuvempushree” award presented by the Buddha-Basava-Gandhi Cultural Trust (R).