ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರು ಇಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವತಿಯಿಂದ ಕಾಡಾನೆ–ಮಾನವ ಸಂಘರ್ಷ ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಅನುಕೂಲಕ್ಕಾಗಿ ಮಹೀಂದ್ರ ಕ್ಯಾಂಪರ್ ವಾಹನವನ್ನು ಜಿಲ್ಲಾ ಆನೆ ಕಾರ್ಯಪಡೆಗೆ ಹಸ್ತಾಂತರಿಸಿದರು.
ಹಾಸನದ ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ, ಎನ್‌ಎಚ್‌ಎಐ ವತಿಯಿಂದ ಈ ವಾಹನವನ್ನು ಜಿಲ್ಲಾ ಆನೆ ಕಾರ್ಯಪಡೆಗೆ ಒದಗಿಸಲಾಗಿದ್ದು, ಕಾಡಾನೆಗಳ ಚಲನವಲನ ಮೇಲ್ವಿಚಾರಣೆ ಹಾಗೂ ಗಸ್ತು ಕಾರ್ಯಾಚರಣೆಗಾಗಿ ವಾಹನವನ್ನು ಬಳಸಲಾಗುತ್ತದೆ.
ವಾಹನ ಹಸ್ತಾಂತರ ಕಾರ್ಯಕ್ರಮದ ವೇಳೆ ಮಾನ್ಯ ಸಂಸದರು ಮಾತನಾಡಿ, ಕಾಡಾನೆ–ಮಾನವ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಅರಣ್ಯ ಇಲಾಖೆ ಮತ್ತು ಜಿಲ್ಲಾ ಆನೆ ಕಾರ್ಯಪಡೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಿಬ್ಬಂದಿಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ವಾಹನ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೌರಭ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಜಿಲ್ಲಾ ಆನೆ ಕಾರ್ಯಪಡೆ – ಹಾಸನ, ಶ್ರೀ ಸಯ್ಯದ್ ಅಮಾನುಲ್ಲಾ, ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ – ಹಾಸನ, ಮಧುಸುಧನ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF), ಜಿಲ್ಲಾ ಆನೆ ಕಾರ್ಯಪಡೆ, ಮೋಹನ ವಿ.ಎಸ್, ACF – ಹಾಸನ,
ವಲಯ ಅರಣ್ಯಾಧಿಕಾರಿಗಳು ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಉಪಸ್ಥಿತರಿದ್ದರು.










