ಹಾಸನ: ಚೆನ್ನೈ AMET ಯೂನಿವರ್ಸಿಟಿಯಲ್ಲಿ ಎಲೈಟ್ ಶಾಲಾ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ

ಹಾಸನ: ಹಾಸನ ನಗರದ ಹೇಮಾವತಿ ನಗರದ ಎಲೈಟ್ ಶಾಲೆಯ ಸುಮಾರು 100 ವಿದ್ಯಾರ್ಥಿಗಳು ತಮಿಳುನಾಡಿನ ಚೆನ್ನೈ ನಗರದಲ್ಲಿರುವ AMET (Academy of Maritime Education and Training) ಯೂನಿವರ್ಸಿಟಿಗೆ ಭೇಟಿ ನೀಡಿ, ಸಮುದ್ರಯಾನ ಮತ್ತು ಸಮುದ್ರಯಾನ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಯೋಗಿಕ ಹಾಗೂ ವಿಷಯಾಧಾರಿತ ಜ್ಞಾನವನ್ನು ಪಡೆದರು.

ಎಲೈಟ್ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಈ ಒಂದು ದಿನದ ಕಾರ್ಯಾಗಾರದಲ್ಲಿ, ವಿದ್ಯಾರ್ಥಿಗಳಿಗೆ ಹಡಗುಗಳ ವಿನ್ಯಾಸ, ಕಾರ್ಯವಿಧಾನ, ಸಾಗಣೆ ವ್ಯವಸ್ಥೆ ಹಾಗೂ ಶಿಪ್ ಇಂಜಿನಿಯರ್‌ಗಳ ಕಾರ್ಯ ವೈಖರಿಯ ಕುರಿತು ನೇರ ಅನುಭವದ ಮೂಲಕ ಮಾಹಿತಿ ನೀಡಲಾಯಿತು.

ವಿಶಾಲವಾದ ಹಡಗುಗಳು ಹೇಗೆ ಸಂಚರಿಸುತ್ತವೆ, ಹಡಗಿನೊಳಗಿನ ತಾಂತ್ರಿಕ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಲಾಯಿತು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಮುದ್ರಯಾನ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವ ಜೊತೆಗೆ ಭವಿಷ್ಯದ ವೃತ್ತಿ ಆಯ್ಕೆಗಳಿಗೆ ದಿಕ್ಕು ನೀಡುವಲ್ಲಿ ಸಹಕಾರಿಯಾಯಿತು. ಈ ಸಂದರ್ಭದಲ್ಲಿ ಎಲೈಟ್ ಶಾಲೆಯ ಆಡಳಿತಾಧಿಕಾರಿ ನಾಗರಾಜ್ ಕೆ.ಎಂ. ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.