ಸಕಲೇಶಪುರ: ಅರಣ್ಯ ಇಲಾಖೆ ಅಧಿಕಾರಿಗಳಿಂದ ಮೂರ್ಕಣ್ಣು ಗುಡ್ಡ ಜನರ ಮೇಲೆ ದೌರ್ಜನ್ಯ: ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಆರೋಪ

ಸಕಲೇಶಪುರ: ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ಮಾಜಿ ಶಾಸಕ ಹೆಚ್‌.ಎಂ. ವಿಶ್ವನಾಥ್ ಆರೋಪಿಸಿದ್ದಾರೆ.

ತಾಲೂಕಿನ ಅಗನಿ ಗ್ರಾಮದಲ್ಲಿ ಸೆಕ್ಷನ್ 4 ರಿಂದ ಸಮಸ್ಯೆ ಎದುರಿಸುತ್ತಿರುವ ಮೂರ್ಕಣ್ಣು ಗುಡ್ಡ ವ್ಯಾಪ್ತಿಯ 8 ಗ್ರಾಮಗಳ ಸಂತ್ರಸ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, 1920 ರಲ್ಲಿ ಅಂದಿನ ಮೈಸೂರು ಸರ್ಕಾರ 8 ಗ್ರಾಮಗಳ 7938 ಎಕರೆಯನ್ನು ಅಭಯಾರಣ್ಯ ಮಾಡುವ ನಿಟ್ಟಿನಲ್ಲಿ ಸೇಕ್ಷನ್ 4 ನ್ನು ಜಾರಿಗೊಳಿಸಿತ್ತು. ಸರ್ಕಾರದ ಈ ನಡೆಯನ್ನು ವಿರೋಧಿಸಿ ಸ್ಥಳೀಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ 1924 ರಲ್ಲಿ ಈ ವ್ಯಾಪ್ತಿಯನ್ನು ಸೇಕ್ಷನ್ 4 ರಿಂದ ಕೈಬಿಟ್ಟಿದೆ. ಆದರೆ ಶತಮಾನ ಕಳೆದ ನಂತರ ಈ ಯೋಜನೆಗೆ ಮರುಜೀವ ನೀಡಿರುವ ಅರಣ್ಯ ಇಲಾಖೆ ಈ ಭಾಗವನ್ನು ಅಭಯಾರಣ್ಯ ಎಂದು ಘೋಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಆದರೆ ಶತಮಾನದ ನಂತರ ಈ ಯೋಜನೆ ಜಾರಿಗೆ ಮುಂದಾಗಿರುವ ಅರಣ್ಯ ಇಲಾಖೆಯ ನಡೆ ತಪ್ಪು. ಶತಮಾನದ ಅಂತರದಲ್ಲಿ ಹಲವು ತಲೆಮಾರುಗಳೆ ಕಳೆದಿದ್ದು ಅಂದು ಹಾಗೂ ಇಂದಿನ ಜನಾಂಗದ ನಡುವೆ ಹಲವು ಬದಲಾವಣೆ ಇದೆ ಇಷ್ಟೇಲ್ಲ ವೈರುದ್ಯವಿದ್ದರು. ಪಸ್ತಕ ದಿನಗಳಲ್ಲಿ ನಿತ್ಯ ಈ ಭಾಗದ ರೈತರಿಗೆ ಅರಣ್ಯ ಇಲಾಖೆ ಮಾನಸಿಕ ಹಿಂಸೆ ನೀಡುತ್ತಿದ್ದು ತೋಟ ಬೆಳೆಯುವಂತಿಲ್ಲ,ರಸ್ತೆ ನಿರ್ಮಿಸುವಂತಿಲ್ಲ, ಮನೆ ಕಟ್ಟುವಂತಿಲ್ಲ ಎಂಬೇಲ್ಲ ಕಟ್ಟುಪಾಡಿನಿಂದಾಗಿ ಈ ಭಾಗದ ಜನರಿಗೆ ಜೀವನವೇ ಬೇಸರ ಮೂಡಿಸಿದೆ.

ಈ ಭಾಗದ 8 ಗ್ರಾಮಗಳ ವ್ಯಾಪ್ತಿಯಲ್ಲಿ 1920 ರಿಂದಲು ಹಂತಹಂತವಾಗಿ ರೈತರಿಗೆ ಸರ್ಕಾರಗಳು ಭೂಮಿ ಮಂಜೂರು ಮಾಡಿದೆ. ಪಾರಂ 50,53 ರಲ್ಲಿ ಭೂಮಿ ಮಂಜೂರು ಮಾಡಲಾಗಿದೆ. 94 ಸಿಯಡಿ ಹಲವು ಬಡವರಿಗೆ ಮನೆ ನೀಡಲಾಗಿದೆ. ಅತಿಮುಖ್ಯವಾಗಿ ಮೂರ್ಕಣ್ಣ್ ಗುಡ್ಡ ವ್ಯಾಪ್ತಿಯಲ್ಲೆ ಸರ್ಕಾರದ ಅತಿಮುಖ್ಯ ಯೋಜನೆಯಾದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಜಾರಿಗೊಂಡಿದೆ.

ಇಂತಹ ಹತ್ತು ಹಲವು ಯೋಜನೆಗಳು ಕಳೆದೊಂದು ಶತಮಾನದಲ್ಲಿ ಈ ಭಾಗದಲ್ಲಿ ಜಾರಿಗೊಂಡಿದೆ. ಇದಲ್ಲದೆ ಈ ಭಾಗದಲ್ಲಿ ಹಲವು ಬೃಹತ್ ಕಂಪನಿಗಳು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಇವರ ತಂಟೆಗೆ ಹೋಗದ ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ,ಮದ್ಯಮ ಗಾತ್ರದ ರೈತರ ಜಮೀನು ಕಬಳಿಸಲು ಇಲ್ಲದ ಕಾರಣ ನೀಡುತ್ತಿದೆ. ವಿವಿಧ ಇಲಾಖೆಗಳಿಗೆ ಜಮೀನು ಮಂಜೂರು ಮಾಡಿರುವ ಬಗ್ಗೆ ಅರಣ್ಯ ಇಲಾಖೆ ಸಂಭAದಿತ ಇಲಾಖೆಗಳೊಂದಿಗೆ ಚರ್ಚೆ ನಡೆಸ ಬೇಕು ಇದನ್ನು ಹೊರತುಪಡಿಸಿ ತಮ್ಮಷ್ಟಕ್ಕೆ ಇರುವ ರೈತರಿಗೆ ನೋಟಿಸ್ ನೀಡಿ ಇವರ ನೆಮ್ಮದಿ ಹಾಳು ಮಾಡಲಾಗುತ್ತಿದೆ.

ಅಭಯಾರಣ್ಯ ಎಂದು ಘೋಷಿಸುವ ಮುನ್ನ ಸೇಕ್ಷನ್ 1 ರಿಂದ ಸೇಕ್ಷನ್ 17 ರವರಗೆ ಹಲವು ನಿಯಮಗಳನ್ನು ಜಾರಿಗೊಳಿಸ ಬೇಕು ಆದರೆ, ಈ ಯಾವುದೆ ನಿಯಮಗಳು ಪಾಲನೆಯಾಗದೆ ಹತ್ತಾರು ತಲೆಮಾರುಗಳು ಕಳೆದಿರುವ ಸ್ಥಳೀಯರನ್ನು ಇಲ್ಲಿಂದ ಒಕ್ಕಲೆಬ್ಬಿಸಲು ವ್ಯವಸ್ಥಿತ ಪ್ರಯತ್ನಗಳು ನಡೆದಿವೆ.

ಯಾವುದೆ ಕಾರಣಕ್ಕೂ ಇಲ್ಲಿನ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ. ಅರಣ್ಯ ಇಲಾಖೆ ಸೇಕ್ಷನ್ ನಾಲ್ಕರ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡಿದರೆ, ಸಂತೃಸ್ತರ ಪರವಾಗಿ ಯಾವುದೆ ಮಟ್ಟದ ಹೋರಾಟಕ್ಕೂ ನಾವು ಸಿದ್ದವಿದ್ದೇವೆ ಎಂದು ಎಚ್ಚರಿಸಿದರು. ಅಗನಿ ಗ್ರಾಮದಿಂದ ಜಾಥ ಮೂಲಕ ಪಟ್ಟಣಕ್ಕೆ ಆಗಮಿಸಿದ ಪ್ರತಿಭಟನಕಾರರು ಶಾಸಕ ಸೀಮೆಂಟ್ ಮಂಜು ಹಾಗೂ ತಹಸೀಲ್ದಾರ್ ಸುಪ್ರೀತಾ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸೀಮೆಂಟ್ ಮಂಜು, ಮೂರ್ಕಣ್ಣ್ ಗುಡ್ಡವ್ಯಾಪ್ತಿಯನ್ನು ಅಭಯಾರಣ್ಯ ಮಾಡುವ ನಿಟ್ಟಿನಲ್ಲಿ ನಿಯಮಬಾಹಿರವಾಗಿ ಸ್ಥಳೀಯರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಎಸೆಗುತ್ತಿರುವುದು ಅತ್ಯಂತ ಬೇಸರದ ವಿಚಾರ. ಕಳೆದ ಕೆಲವು ದಿನಗಳ ಹಿಂದೆ ಸಂತೃಸ್ತರ ಸಭೆ ನಡೆಸಿ ಆಹವಾಲುಗಳನ್ನು ಕೇಳಲಾಗಿದ್ದು ಸಂತೃಸ್ತರ ಪರವಾಗಿ ಯಾವುದೆ ಮಟ್ಟದ ಹೋರಾಟಕ್ಕೂ ಸಿದ್ದನಿದ್ದೇನೆ.

ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ನಡೆಸಲಿದ್ದೇನೆ ಯಾವುದೆ ಕಾರಣಕ್ಕೂ ಈ ಭಾಗದ ರೈತರು ಎದೆಗುಂದುವ ಅಗತ್ಯವಿಲ್ಲ ನಿಮ್ಮೊಂದಿಗೆ ನಾವಿದ್ದೇವೆ ಎಂದರು. ಪ್ರತಿಭಟನೆ ನೇತೃತ್ವವವನ್ನು ಹೋರಾಟಗಾರರಾದ ಪೂರ್ಣೇಶ್ ಹಟ್ಟಿಬೆಟ್ಟ, ಸ್ಟೋನ್‌ವ್ಯಾಲಿಸುಬಾಷ್,ಓಂಕುಮಾರ್,ಮಹೇಶ್, ಅರವೀಂದ್,ಪೂರ್ಣ,ಜಯಶ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು