ಸಕಲೇಶಪುರ: ರಾತ್ರಿ ಗಸ್ತು ತಿರುಗುವ ವೇಳೆ ಆನೆಮಹಲ್ ಹತ್ತಿರದ *ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ (NH-75)*ಯಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಂದು ಲೋಡ್ ಕಾಡುಮರದ ಬಿಲೇಟ್ಸ್‌ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಗಾಡಿ ಸಂಖ್ಯೆ KA-12 C 3545ರಲ್ಲಿ ಸಾಗಾಟವಾಗುತ್ತಿದ್ದ ಮರದ ಬಿಲೇಟ್ಸ್‌ಗಳನ್ನು ಅಧಿಕಾರಿಗಳು ತಡೆದು ಪರಿಶೀಲಿಸಿದಾಗ ಅಕ್ರಮ ಸಾಗಾಟ ಎಂದು ದೃಢಪಟ್ಟಿತು. ಬಳಿಕ ವಾಹನ ಮತ್ತು ವಸ್ತುಗಳನ್ನು ಇಲಾಖೆಯ ಪರವಾಗಿ ಅಮಾನತ್ತುಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲಿಸಲಾಯಿತು.
ಕಾರ್ಯಾಚರಣೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ ಎಚ್.ಆರ್. ಹೇಮಂತ್ ಕುಮಾರ್, ಉಪವಲಯ ಅರಣ್ಯಾಧಿಕಾರಿಗಳು ಅರ್ಜುನ್ ಮತ್ತು ಮಂಜುನಾಥ್, ಅರಣ್ಯ ಪಾಲಕರು ಲೋಕೇಶ್, ಉಮೇಶ್, ದೇವರಾಜ್, ಹಾಗೂ ಅರಣ್ಯ ವೀಕ್ಷಕ ಲೋಕೇಶ್ ಮತ್ತು ವಾಹನ ಚಾಲಕ ಆಶ್ರಯ ಸಕ್ರಿಯವಾಗಿ ಪಾಲ್ಗೊಂಡಿದ್ದರು.










