ಹಾಸನ: ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ “ಚಿಗುರು ಉತ್ಸವ”ದಲ್ಲಿ ಹಾಸನದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ದಿಗಂತ್ ಗಾಯನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಂಗೀತ ವಿಭಾಗದಲ್ಲಿ ತನ್ನ ವಿಶಿಷ್ಟ ಗಾಯನ ಕೌಶಲ್ಯದಿಂದ ಪ್ರೇಕ್ಷಕರ ಹೃದಯ ಗೆದ್ದ ದಿಗಂತ್, ಕಠಿಣ ಸ್ಪರ್ಧೆಯಲ್ಲಿ ತಾನು ಭಿನ್ನನೆಂದು ತೋರಿಸಿ, ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಸಾಧನೆಗಾಗಿ ಅವರಿಗೆ “ಚಿಗುರು 2025-26 ಪ್ರಶಂಸಾ ಪತ್ರ”ವನ್ನು ಪ್ರದಾನ ಮಾಡಲಾಯಿತು. ಜೊತೆಗೆ, ಪ್ರೋತ್ಸಾಹಕವಾಗಿ ₹15,000 ನಗದು ಬಹುಮಾನವನ್ನು ಸಹ ನೀಡಲಾಯಿತು.
ಶಾಲೆಯ ಸ್ಥಾಪಕ ಡಾ. ಎಚ್. ಎನ್. ಚಂದ್ರಶೇಖರ್ ಹಾಗೂ ಕಾರ್ಯದರ್ಶಿ ಶ ಮಮತಾ ಅವರು, “ದಿಗಂತ್ ಸಾಧನೆ ನಮ್ಮ ಶಾಲೆಗೆ ಹೆಮ್ಮೆ ತಂದಿದೆ. ಶ್ರಮ, ಅಭಿರುಚಿ ಹಾಗೂ ಶಿಸ್ತಿನೊಂದಿಗೆ ಮುಂದುವರಿದರೆ ಅವನು ಭವಿಷ್ಯದಲ್ಲಿ ದೊಡ್ಡ ಮಟ್ಟದ ಗಾಯಕನಾಗಿ ಬೆಳಯಲಿ” ಎಂದು ಹಾರೈಸಿದರು.
ಶಿಕ್ಷಕರು, “ದಿಗಂತ್ ನಮ್ಮೆಲ್ಲರಿಗೂ ಮಾದರಿ. ಅವನ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸಹ ಪ್ರೇರಣೆ ನೀಡುತ್ತದೆ” ಎಂದು ಸಂತೋಷಪಟ್ಟರು. ಪೋಷಕರು ತಮ್ಮ ಮಗನ ಪರಿಶ್ರಮ ಮತ್ತು ಸಾಧನೆಗಾಗಿ ಹೆಮ್ಮೆ ವ್ಯಕ್ತಪಡಿಸಿದರು.










