11 C
Munich
Home News ಚನ್ನರಾಯಪಟ್ಟಣ:ದಿಡಗ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಚ್.ಕೆ. ಯೋಗೇಶ್ ಮೂರನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಚನ್ನರಾಯಪಟ್ಟಣ:ದಿಡಗ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಚ್.ಕೆ. ಯೋಗೇಶ್ ಮೂರನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ದಿಡಗ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್ ಕೆ ಯೋಗೇಶ್ ಅವಿರೋಧವಾಗಿ ಆಯ್ಕೆಯಾದ ನಂತರ ಅಭಿನಂದನೆ ಸ್ವೀಕರಿಸುತ್ತಿರುವ ದೃಶ್ಯ
ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಕೆ. ಯೋಗೇಶ್ ಮೂರನೇ ಬಾರಿ ಅವಿರೋಧ ಆಯ್ಕೆ

ಚನ್ನರಾಯಪಟ್ಟಣ ತಾಲೂಕಿನ ದಿಡಗ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಚ್.ಕೆ. ಯೋಗೇಶ್ ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಂಘದ ಅಭಿವೃದ್ಧಿಗೆ ಬದ್ಧತೆ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ, ಏಪ್ರಿಲ್,22,2026(www.kannadapost.com): ತಾಲ್ಲೂಕಿನ ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಉಳ್ಳಾವಳ್ಳಿ ಗ್ರಾಮದ ಎಚ್.ಕೆ. ಯೋಗೇಶ್ ಅವರು ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ. ಯೋಗೇಶ್ ಹೊರತುಪಡಿಸಿ ಇತರರು ನಾಮಪತ್ರ ಸಲ್ಲಿಸದ ಹಿನ್ನೆಲೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಎಚ್.ಕೆ. ಯೋಗೇಶ್ ಮಾತನಾಡಿ, ಶಾಸಕ ಸಿ.ಎನ್. ಬಾಲಕೃಷ್ಣ ಅವರ ಮಾರ್ಗದರ್ಶನ ಹಾಗೂ ಸಂಘದ ನಿರ್ದೇಶಕರ ಸಹಕಾರದೊಂದಿಗೆ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.ಹಿಂದೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಸಂಘವು 3,200 ಷೇರುದಾರ ಸದಸ್ಯರನ್ನು ಹೊಂದಿದ್ದು, ಕೆಸಿಸಿ 13.64 ಕೋಟಿ ರೂ. ಹಾಗೂ ಎಚ್ಎಸ್ವಿ 2.44 ಕೋಟಿ ರೂ. ಸೇರಿದಂತೆ ಒಟ್ಟು 16 ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ. ಇನ್ನೂ 3 ಕೋಟಿ ರೂ. ಅನುದಾನ ಅಗತ್ಯವಿದ್ದು, ಅದಕ್ಕಾಗಿ ಮನವಿ ಮಾಡಲಾಗಿದೆ ಎಂದು ಹೇಳಿದರು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿದರೆ ಜೀವನ ಸುಧಾರಣೆಗೆ ಸಹಕಾರಿ ಆಗುತ್ತದೆ. 10 ಗುಂಟೆ ಜಮೀನು ಹೊಂದಿರುವ ಸಣ್ಣ ರೈತರಿಗೂ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಆಯ್ಕೆಯಾದ ಬಳಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯೋಗೇಶ್ ಅವರನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪುಟ್ಟರಾಜು, ಎಂ.ಆರ್. ವಾಸು, ರಘುರಾಂ, ತಾತೇಗೌಡ, ಕುಮಾರ್, ಟಿ.ಎಸ್. ಮಧು, ಬಾಲು, ಎಚ್.ಎಸ್. ಮಹೇಶ್, ಲೋಕೇಶ್, ವೆಂಕಟೇಶ್, ಜಯಮ್ಮ, ಸುಮಿತ್ರ, ತುಳಸಿ, ನಿಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

H.K. Yogesh has been elected unopposed as President of Didaga Agricultural Cooperative Society in Channarayapatna for the third time.


Channarayapatna: H.K. Yogesh from Ullavalli village has been elected unopposed as the President of Didaga Agricultural Cooperative Society for the third time.

The election for the vacant president post was scheduled on Wednesday. As no other nominations were filed apart from H.K. Yogesh, he was declared elected unopposed.

Speaking after his selection, Yogesh said he will work towards the overall development of the society with the guidance of MLA C.N. Balakrishna and support from directors.

He recalled that during his earlier tenure, a new building was constructed after demolishing the old structure.

The society has 3,200 shareholder members and has provided loan facilities worth ₹16 crore, including ₹13.64 crore under KCC and ₹2.44 crore under HSV schemes.

He further stated that efforts will be made to secure additional ₹3 crore funding and provide better support to farmers.

Yogesh emphasized the importance of zero-interest loans for farmers, including those owning small landholdings of just 10 guntas.

Taluk Cooperative Development Officer Vijayendra served as the election officer.

Supporters and members celebrated his election by distributing sweets.

Several dignitaries including Puttaraju, M.R. Vasu, Raghuram, Tategowda, Kumar, T.S. Madhu, Balu, H.S. Mahesh, Lokesh, Venkatesh, Jayamma, Sumitra, Tulasi, and Ningamma were present.

error: Content is protected !!