ಚಿಕ್ಕಮಗಳೂರು : ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಹೊಸ ನಿಯಮ ಜಾರಿಗೊಳಿಸಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸೆಪ್ಟೆಂಬರ್ 1, 2025ರಿಂದ ಪ್ರತಿದಿನ 2 ಸ್ಲಾಟ್‌ಗಳಲ್ಲಿ ವಾಹನ ಪ್ರವೇಶಕ್ಕೆ ಮಿತಿ ನಿಗದಿಪಡಿಸಲು ನಿರ್ಧರಿಸಲಾಗಿದೆ. ಪ್ರತಿ ಸ್ಲಾಟ್‌ಗೆ ಗರಿಷ್ಠ 600 ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಾಹನ ಮಿತಿಯ ವಿವರ:
| ಕ್ರ.ಸಂ | ವಾಹನದ ವಿವರ | ಬೆಳಿಗ್ಗೆ 6ರಿಂದ ಮಧ್ಯಾಹ್ನ 12 | ಮಧ್ಯಾಹ್ನ 1ರಿಂದ ಸಂಜೆ 6 |
|---|---|---|---|
| 1 | ದ್ವಿಚಕ್ರ ವಾಹನ / ಆಟೋ | 100 | 100 |
| 2 | ಸ್ಥಳೀಯ ಹಳದಿ ಬೋರ್ಡ್ ಹೊಂದಿರುವ ಟ್ಯಾಕ್ಸಿ | 100 | 100 |
| 3 | ಕಾರ್ | 50 | 50 |
| 4 | 10 ಆಸನಗಳ ಟೂಫಾನ್ ವಾಹನ | 50 | 50 |
| 5 | ಇತರೆ (ಪ್ರವಾಸಿ ವಾಹನಗಳು) | 300 | 300 |
ವಿ.ಸೂ: ಖಾಸಗಿ ಬಸ್ ಹಾಗೂ ಮಿನಿ ಬಸ್ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮೇಲಿನ ವಾಹನ ಸಂಖ್ಯೆಯಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ತೆರಳುವ ಪ್ರವಾಸಿಗರ ವಾಹನಗಳೂ ಒಳಗೊಂಡಿರುತ್ತವೆ.
ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ
ಪ್ರವಾಸಿಗರು ಸದರಿ ಪ್ರವಾಸಿ ತಾಣಗಳಿಗೆ ತೆರಳಲು ಮುಂಚಿತವಾಗಿ ಆನ್‌ಲೈನ್ ಮೂಲಕ ಪ್ರವೇಶ ಶುಲ್ಕ ಪಾವತಿಸುವುದು ಕಡ್ಡಾಯ. ಶುಲ್ಕ ಪಾವತಿಗೆ ಜಿಲ್ಲಾಧಿಕಾರಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಂಕ್ ಲಭ್ಯವಿದೆ:
👉 https://chikkamagaluru.nic.in/en/tourism/
ಪ್ರವಾಸೋದ್ಯಮ ಇಲಾಖೆ, ಚಿಕ್ಕಮಗಳೂರು ಸಾರ್ವಜನಿಕರು ಹಾಗೂ ಪ್ರವಾಸಿಗರು ನಿಯಮ ಪಾಲಿಸಿ ಸಹಕರಿಸಬೇಕೆಂದು ಮನವಿ ಮಾಡಿದೆ.










