5.6 C
Munich
Home News Politics ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ

ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ

ಚನ್ನರಾಯಪಟ್ಟಣ: ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಜಿ.ಎನ್.ಕೊಪ್ಪಲು ಗ್ರಾಮದ ಎನ್.ಎಸ್‌.ಮಂಜುನಾಥ್ ಅವರು ಶನಿವಾರ ಅವಿರೋಧವಾಗಿ ಆಯ್ಕೆಗೊಂಡರು.

ಈ ಹಿಂದೆ ಅಧ್ಯಕ್ಷರಾಗಿದ್ದ ಎನ್.ಆರ್.ಶಿವಕುಮಾರ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಶನಿವಾರ ನಡೆಯಿತು.

ಎನ್.ಎಸ್‌ಮಂಜುನಾಥ್(ಸ್ವಾಮಣ್ಣ) ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹರೀಶ್ ಘೋಷಿಸಿದರು.

ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಲಹೆ, ಸೂಚನೆ ಪಡೆದು ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು ನಿರ್ವಹಣೆ ಹಾಗೂ ಉತ್ತಮ ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನೂತನ ಅಧ್ಯಕ್ಷ ಎನ್.ಎಸ್.ಮಂಜುನಾಥ್ ಅವರನ್ನು ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು. ಪಂಚಾಯಿತಿ ವತಿಯಿಂದ ಅಭಿನಯಿಸಲಾಯಿತು.

ಗ್ರಾ.ಪಂ ಉಪಾಧ್ಯಕ್ಷೆ ರಾಧಾ ಹರೀಶ್, ಸದಸ್ಯರಾದ ವಿಜಯಲಕ್ಷ್ಮಿ ಜಗದೀಶ್, ಶಬಿನ್ ತಾಜ್, ಜಬಿನ್ ತಾಜ್, ವಿಠಲ್ ಕುಮಾರ್, ಹೊನ್ನೇಗೌಡ, ನಟರಾಜ್, ಗೌಡಕಿ ಮಂಜು, ಗ್ಯಾಸ್ ರಾಜು, ರೇಷ್ಮಾ, ಸವಿತಾ, ದ್ರಾಕ್ಷಾಯಿಣಿ, ಮಂಜುಳಾ,
ಮುಖಂಡರಾದ ದೊರೆಸ್ವಾಮಿ, ತೋಟಿ ನಾಗರಾಜ್, ಮಹಮ್ಮದ್ ಜಾವಿದ್, ಕೃಪಾ ಶಂಕರ್, ಪುಟ್ಟಸ್ವಾಮಿ, ವಿಕ್ಟರ್, ಪಟೇಲ್ ಕುಮಾರ್, ರಂಗಸ್ವಾಮಿ, ಶಂಕರ್, ಪ್ರಕಾಶ್, ಬೆಟ್ಟಯ್ಯ, ದಿನೇಶ್ ಬಾಬು, ಪಿಡಿಒ ಶಿವರಾಂ, ಬಿಲ್ ಕಲೆಕ್ಟರ್ ನಾಗರಾಜ್, ಸೇರಿದಂತೆ ಇತರರು ಹಾಜರಿದ್ದರು,

error: Content is protected !!