11 C
Munich
Home ಮನರಂಜನೆ ಸಿನಿಮಾ ರಿತನ್ಯಾ ವಿಜಯ್ ಬರ್ತ್‌ಡೇ | ಫಸ್ಟ್‌ಲುಕ್‌ ರಿಲೀಸ್‌ ಮಾಡಿದ “ಲ್ಯಾಂಡ್ ಲಾರ್ಡ್” ಚಿತ್ರತಂಡ

ರಿತನ್ಯಾ ವಿಜಯ್ ಬರ್ತ್‌ಡೇ | ಫಸ್ಟ್‌ಲುಕ್‌ ರಿಲೀಸ್‌ ಮಾಡಿದ “ಲ್ಯಾಂಡ್ ಲಾರ್ಡ್” ಚಿತ್ರತಂಡ

The "Land Lord" team wished Ritanya a happy birthday by releasing her first look.

ದುನಿಯಾ ವಿಜಯ್, ರಚಿತಾ ರಾಮ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “ಲ್ಯಾಂಡ್ ಲಾರ್ಡ್” ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ವಿಜಯ್ ಸಹ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಂದು (ಆಗಸ್ಟ್ 30) ರಿತನ್ಯ ಅವರ ಜನ್ಮದಿನ. ಅಂದು ರಿತನ್ಯಾ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ “ಲ್ಯಾಂಡ್ ಲಾರ್ಡ್” ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ರಿತನ್ಯಾ ವಿಜಯ್ ಅವರು ಭಾಗ್ಯ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಲ್ಯಾಂಡ್ ಲಾರ್ಡ್” ಚಿತ್ರದ ರಿತನ್ಯ ವಿಜಯ್ ಅವರ ಫಸ್ಟ್ ಲುಕ್ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ ಹಾಗೂ ಕುತೂಹಲ ಮೂಡಿಸಿದೆ‌.

ರಿತನ್ಯ

“ಸಾರಥಿ” ಚಿತ್ರವನ್ನು ನಿರ್ಮಿಸಿದ್ದ ಕೆ‌.ವಿ.ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ.ಕೆ.ಎಸ್ ಅವರು “ಸಾರಥಿ ಫಿಲಂಸ್” ಮೂಲಕ ನಿರ್ಮಾಣ‌ ಮಾಡುತ್ತಿರುವ ಚಿತ್ರವಿದು. ಜಡೇಶ್‌ ಕೆ ಹಂಪಿ ನಿರ್ದೇಶಕ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ “ಲ್ಯಾಂಡ್ ಲಾರ್ಡ್” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ವರ್ಷದ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

error: Content is protected !!