ಚಾಮರಾಜನಗರ: ಮಾದಪ್ಪನ ಭಕ್ತನ ಕೊಂದ ಡೇಂಜರ್ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯ ರಂಗಸ್ವಾಮಿ ಒಡ್ಡು ಬಳಿಯಲ್ಲಿ ಪಾದಯಾತ್ರೆಯಲ್ಲಿದ್ದ ಮಾದಪ್ಪನ ಭಕ್ತನ ಮೇಲೆ ಚಿರತೆ ದಾಳಿ ನಡೆಸಿತ್ತು.

ಬುಧವಾರ ಬೆಳಗಿನ ಜಾವ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರದೀಪ್‌ನನ್ನು ಚಿರತೆ ಬಲಿ ಪಡೆದಿತ್ತು.ಈ ಹಿನ್ನೆಲೆ ಅರಣ್ಯ ಹಾಗೂ ಪೋಲಿಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಜಂಟಿಕಾರ್ಯಾಚರಣೆಯ ಮೂಲಕ ಚಿರತೆ ಯಶಸ್ವಿಯಾಗಿದ್ದಾರೆ.

ಚಿರತೆ ಇರುವುದನ್ನು ದ್ರೋಣ್ ಕ್ಯಾಮೆರಾ ಮೂಲಕ ಪತ್ತೆ ಹಚ್ಚಿಲಾಗಿತ್ತು. ಬಳಿಕ ಬೋನ್ ಕೂಡ ಅಳವಡಿಸಲಾಗಿತ್ತು. ಬೆಳಿಗ್ಗೆಯಿಂದಲೇ ಚಿರತೆ ಅಲ್ಲೇ ಓಡಾಡುತ್ತಿತ್ತು. ಮಂಪರು ಬರುವ ಇಂಜೆಕ್ಷನ್ ನೀಡುವ ಮೂಲಕ ಗುರುವಾರ ರಾತ್ರಿ 9:30ಕ್ಕೆ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮಾದಪ್ಪನ ಭಕ್ತನನ್ನು ಬೆಳಗಿನ ಜಾವ ಚಿರತೆ ಭಕ್ತನನ್ನು ಅರಣ್ಯ ಪ್ರದೇಶದಲ್ಲಿ ಕೊಂದು ಹಾಕಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೂರು ದಿನಗಳ ಕಾಲ ಪಾದಯಾತ್ರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮೂರು ದಿನಗಳ ಕಾಲ ನಿರ್ಬಂಧ ಇರುವ ಮೂಲಕ ಚಿರತೆ ಸೆರೆ ಹಿಡಿಯಲು ಆದೇಶಿಸಿತ್ತು. ಅದರ ಅನ್ವಯ ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮತ್ತು ಚಿರತೆ ಸೆರೆಹಿಡಿಯುವ ತಂಡ ರಾತ್ರಿ 9:30 ರಲ್ಲಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

ಮಹದೇಶ್ವರ ವನ್ಯ ಜೀವಿಧಾಮದ ಡಿಸಿಎಫ್ ಭಾಸ್ಕ‌ರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈ ಹಿನ್ನೆಲೆ ಚಿರತೆಯನ್ನು ಸೆರೆ ಹಿಡಿಯಲು ಬೋನ್ ಕೂಡ ಅಳವಡಿಸಲಾಗಿತ್ತು. ಸಾರ್ವಜನಿಕರಿಂದ ಕೂಡ ಚಿರತೆ ಸೆರೆ ಹಿಡಿಯುವಂತೆ ಆಗ್ರಹ ಕೇಳಿ ಬಂದಿತ್ತು.

ಕಳೆದ ಹಲವಾರು ದಿನಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಹಲವಾರು ಬಾರಿ ಭಕ್ತರಿಗೆ ಚಿರತೆ ಕಾಣಿಸಿಕೊಂಡಿತ್ತು.