2.2 C
Munich
Home ಕ್ರೈಮ್‌ ಹೃದಯಾಘಾತಕ್ಕೆ ಗೃಹಿಣಿ ಬಲಿ: ಹಾಸನದಲ್ಲಿ ಮುಂದುವರಿದ ಹಾರ್ಟ್ ಅಟ್ಯಾಕ್ ಸಾವಿನ ಸರಣಿ

ಹೃದಯಾಘಾತಕ್ಕೆ ಗೃಹಿಣಿ ಬಲಿ: ಹಾಸನದಲ್ಲಿ ಮುಂದುವರಿದ ಹಾರ್ಟ್ ಅಟ್ಯಾಕ್ ಸಾವಿನ ಸರಣಿ

Cases of people dying due to heart attacks continue, as a homemaker passed away last night in Dasarakoppal.

ಹಾಸನ, ಜುಲೈ 04, 2025:  ಜಿಲ್ಲೆಯಲ್ಲಿ ಹೃದಯಾಘಾತದಿಂದ ಜನರು ಸಾವನ್ನಪ್ಪುವ ಪ್ರಕರಣಗಳು ಮುಂದುವರಿದಿದ್ದು, ಭಗತ್ ಸಿಂಗ್ ರಸ್ರೆಯಲ್ಲಿ ಕಳೆದ ರಾತ್ರಿ ಗೃಹಿಣಿಯೊಬ್ಬರು ಮೃತಪಟ್ಟಿದ್ದಾರೆ.

ನಗರದ ದಾಸರಕೊಪ್ಪಲಿನಲ್ಲಿ ವಾಸವಾಗಿದ್ದ ಬಿ.ಎನ್.ವಿಮಲಾ (55) ಎಂಬ ಮಹಿಳೆ ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಕಲೇಶಪುರ ತೋಟದಗದ್ದೆಯ ಕುಮಾರ್ ಎಂಬುವವರ ಧರ್ಮಪತ್ನಿಯಾಗಿದ್ದ ವಿಮಲಾ, ಕುಟುಂಬದೊಂದಿಗೆ ಭಗತ್ ಸಿಂಗ್ ರಸ್ತೆಯ ಮನೆಯಲ್ಲಿ ನೆಲೆಸಿದ್ದರು.

ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 35 ಮಂದಿ ಮೃತಪಟ್ಟಿರುವುದು ದಾಖಲಾಗಿದೆ. ಈ ಸರಣಿ ಸಾವುಗಳು ಜಿಲ್ಲೆಯ ಜನರಲ್ಲಿ ಭಯ ಹಾಗೂ ಆತಂಕವನ್ನು ಹೆಚ್ಚಿಸಿದ್ದು, ಆರೋಗ್ಯ ಇಲಾಖೆಯಿಂದ ಸೂಕ್ತ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

error: Content is protected !!