ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಹಾಗೂ ಕಾವ್ಯ ಶೈವ ನಡುವಿನ ಮನಸ್ತಾಪ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಕಾವ್ಯ ಶೈವ ಅವರು ಗಿಲ್ಲಿಗೆ ನಿರಂತರವಾಗಿ ಟಾಂಟ್ ನೀಡುತ್ತಿದ್ದರು. ನಂತರ ಪರಿಸ್ಥಿತಿ ಬದಲಾಗಿದ್ದು, ಗಿಲ್ಲಿ ನಟರೇ ಮುಂದೆ ಬಂದು ಕಾವ್ಯ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಇತ್ತ ಆಟ ಆಡಿದ ಬಳಿಕ ಗಿಲ್ಲಿ ನಟರ ಅನಾರೋಗ್ಯ ಮತ್ತಷ್ಟು ಹೆಚ್ಚಾಗಿದೆ.
ಆಟದ ವಿಚಾರಕ್ಕೆ ಮಾತುಕತೆ
ಬಿಗ್‌ಬಾಸ್ ಮನೆಯಲ್ಲಿ ನಡೆದ ಟವರ್ ಟಾಸ್ಕ್ ವೇಳೆ ಕಾವ್ಯ ಶೈವ ಅವರು ಗಿಲ್ಲಿಯ ಬಳಿ ಬಂದು, “ನನಗೆ ಸಪೋರ್ಟ್ ಮಾಡ್ತೀಯಾ?” ಎಂದು ಕೇಳಿದ್ದಾರೆ. ಇದಕ್ಕೆ ಗಿಲ್ಲಿ ಸಹ ಒಪ್ಪಿಕೊಂಡಿದ್ದಾರೆ. ಸಾಮಾನ್ಯವಾಗಿ ಗಿಲ್ಲಿಯ ಜೊತೆ ಮಾತನಾಡದ ಕಾವ್ಯ, ಆಟದ ಸಂದರ್ಭ ಮಾತ್ರ ಅವರ ಬಳಿ ಬಂದಿರುವುದು ವೀಕ್ಷಕರ ಗಮನ ಸೆಳೆದಿದೆ.
ಟಾಸ್ಕ್ ಏನಾಗಿತ್ತು?
ಟವರ್ ಟಾಸ್ಕ್‌ನಲ್ಲಿ ಕಾವ್ಯ ಶೈವ ಅವರು ಕೋಲುಗಳನ್ನು ಬಳಸಿಕೊಂಡು ಟವರ್ ಏರಬೇಕಾಗಿತ್ತು. ಆ ಕೋಲುಗಳು ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದಿದ್ದರಿಂದ, ಅವುಗಳನ್ನು ಗಿಲ್ಲಿ ತೆಗೆದುಕೊಂಡು ಬರಬೇಕಾಯಿತು. ಅನಾರೋಗ್ಯದಲ್ಲಿದ್ದರೂ ಕೂಡ ಗಿಲ್ಲಿ ನಟರು ಕಾವ್ಯಗಾಗಿ ಟಾಸ್ಕ್‌ನಲ್ಲಿ ಭಾಗವಹಿಸಿ ಸಪೋರ್ಟ್ ಮಾಡಿದ್ದಾರೆ.
ಗಿಲ್ಲಿ ನಟನಿಗೆ ಏನಾಯಿತು?
ಟಾಸ್ಕ್ ಮುಗಿದ ಬಳಿಕ ಕಾವ್ಯ ಶೈವ ಅವರು ಗಿಲ್ಲಿಗೆ ಧನ್ಯವಾದ ಹೇಳಿದ್ದಾರೆ. ಆಗ ಗಿಲ್ಲಿ ನಟರು ಅಸ್ವಸ್ಥವಾಗಿರುವುದು ಕಾವ್ಯಗೆ ಗೊತ್ತಾಗಿದೆ. ಏನಾಯ್ತು ಎಂದು ಕೇಳಿದಾಗ, ಗಿಲ್ಲಿ ಅವರಿಗೆ ವಾಂತಿ ಬರುವಂತಾಗಿದೆ ಎಂದು ತಿಳಿಸಿದ್ದಾರೆ. ತಕ್ಷಣ ರಕ್ಷಿತಾ ಅವರು ಲಿಂಬು ಜ್ಯೂಸ್ ನೀಡಿದ್ದು, ಗಿಲ್ಲಿಗೆ ಸ್ವಲ್ಪ ರಿಲೀಫ್ ದೊರೆತಿದೆ.
ಅನಾರೋಗ್ಯದಲ್ಲೂ ಸಪೋರ್ಟ್
24/7 ಲೈವ್ ನೋಡಿದ ವೀಕ್ಷಕರು, ಗಿಲ್ಲಿ ನಟರಿಗೆ ಜ್ವರ ಇದ್ದರೂ ಕೂಡ ಅವರು ಟಾಸ್ಕ್ ಆಡಿದ್ರು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅನಾರೋಗ್ಯವಿದ್ದರೂ ಸಪೋರ್ಟ್ ಮಾಡುವ ಮನೋಭಾವವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಗಿಲ್ಲಿ ನಟನಿಗೆ ಚಿಕಿತ್ಸೆ
ಗಿಲ್ಲಿ ನಟರನ್ನು ಅನಾರೋಗ್ಯ ಕಾಡುತ್ತಿದ್ದರೂ, ಬಿಗ್‌ಬಾಸ್ ಮನೆಯಲ್ಲೇ ಉತ್ತಮ ಮೆಡಿಕಲ್ ವ್ಯವಸ್ಥೆ ಇದೆ. ಬಿಗ್‌ಬಾಸ್ ಟೀಂ ಗಿಲ್ಲಿ ಆರೋಗ್ಯದ ಕಡೆ ಗಮನ ಹರಿಸುತ್ತಿದೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದ್ದು, ಅಷ್ಟರೊಳಗೆ ಗಿಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.
ಇನ್ನು ಫಿನಾಲೆಗೆ ಯಾರು ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಟಾಪ್ 6 ಕಂಟೆಂಡರ್ ಆಯ್ಕೆಗಾಗಿ ಟಾಸ್ಕ್‌ಗಳು ನಡೆಯುತ್ತಿದ್ದು, ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ರಾಶಿಕಾ ಶೆಟ್ಟಿ, ಧ್ರುವಂತ್, ಧನುಷ್ ಗೌಡ ಹಾಗೂ ಗಿಲ್ಲಿ ನಟರು ಸದ್ಯ ರೇಸ್‌ನಲ್ಲಿದ್ದಾರೆ. ಈ ವಾರ ಯಾರು ಹೊರಬರ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.










