ಬೆಂಗಳೂರು: ಬಿಗ್‌ ಬಾಸ್‌ಗೆ ಮುನ್ನ 80 ಸಾವಿರ, ಈಗ 1 ಮಿಲಿಯನ್ ಫಾಲೋವರ್ಸ್ ಗಿಟ್ಟಿಸಿದ ಗಿಲ್ಲಿ ನಟ!

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಅಲಿಯಾಸ್ ನಟರಾಜು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಕೆಲವೇ ದಿನಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿ, ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲು ಗಿಲ್ಲಿ ನಟ ಅಲಿಯಾಸ್ ನಟರಾಜು ಇನ್ಸಟಾಗ್ರಾಮ್‌ನಲ್ಲಿ ಸುಮಾರು 80 ಸಾವಿರ ಫಾಲೋವರ್ಸ್‌ ಹೊಂದಿದ್ದರು. ಆದರೆ, ಬಿಗ್ ಬಾಸ್ ಶೋಗೆ ಕಾಲಿಟ್ಟ ನಂತರ ಕೇವಲ 100 ದಿನಗಳ ಅವಧಿಯಲ್ಲಿ ಅವರ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ (10 ಲಕ್ಷ) ದಾಟಿದೆ. ಇದೀಗ ಗಿಲ್ಲಿ ನಟನ ಇನ್ಸಟಾಗ್ರಾಮ್ ಖಾತೆಗೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ನೀಡಿದ ಮನರಂಜನೆ, ಕಾಮಿಡಿ, ರೋಮ್ಯಾನ್ಸ್, ಲವ್ ಮತ್ತು ಚೇಷ್ಟೆಗಳು ಪ್ರೇಕ್ಷಕರನ್ನು ಸೆಳೆದಿವೆ. ಇತರ ಸ್ಪರ್ಧಿಗಳೊಂದಿಗೆ ನಡೆಸಿದ ತಮಾಷೆ, ಕಾಲೆಳೆಯುವ ಶೈಲಿ ಕೂಡ ಅವರ ಜನಪ್ರಿಯತೆಗೆ ದೊಡ್ಡ ಕಾರಣವಾಗಿದೆ. ಇದೇ ಕಾರಣಕ್ಕೆ ಇನ್ಸಟಾಗ್ರಾಮ್‌ನಲ್ಲಿ ಫಾಲೋವರ್ಸ್ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ.

ಕಳೆದ 100 ದಿನಗಳಲ್ಲಿ ಗಿಲ್ಲಿ ನಟ ಅಲಿಯಾಸ್ ನಟರಾಜು ಕರ್ನಾಟಕದ ಮನೆಮಾತಾಗಿದ್ದಾರೆ. ಹುಡುಗರು, ಹುಡುಗಿಯರು, ವೃದ್ಧರು ಸೇರಿದಂತೆ ಎಲ್ಲ ವರ್ಗದ ಜನರು ಅವರನ್ನು ಇಷ್ಟಪಡಲು ಆರಂಭಿಸಿದ್ದಾರೆ. ಈ ಅಪಾರ ಪ್ರಸಿದ್ಧಿ ಮತ್ತು ಖ್ಯಾತಿಯೇ ಸೋಷಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್ ಸಂಖ್ಯೆ ದಿಢೀರನೇ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.