📍 Hassan ಹಾಸನ / ಬೇಲೂರು: ಬೇಲೂರು ತಾಲೂಕಿನ ಕಲ್ಕೆರೆ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕುಣಿಗಲ್ ತಾಲೂಕಿನ ಯಲಿಯೂರಿನ ಪ್ರಿಯಾಂಕ (29) ಅವರನ್ನು ಬಿಹಾರ ಮೂಲದ ಆಕೆಯ ಪ್ರೇಮಿ ಡೇವಿಡ್ ಎಂಬಾತನ ಜತೆ ಕುಣಿಗಲ್‌ನ ಲಾಡ್ಜ್ ಒಂದರಲ್ಲಿ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
🕵️♂️ ಕೆರೆಯ ಬಳಿ ಪತ್ತೆಯಾದ ವಸ್ತುಗಳಿಂದ ಸಂಚಲನ
ಶನಿವಾರ ಬೆಳಗ್ಗೆ ಕಲ್ಕೆರೆ ಕೆರೆಯ ಬಳಿ ಮಹಿಳೆಯ ವಸ್ತುಗಳು ಹಾಗೂ ಉಡುಪುಗಳು ಪತ್ತೆಯಾಗಿದ್ದವು.
ಮಹಿಳೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಧರಿಸಿದ್ದ ಹಿನ್ನೆಲೆಯಲ್ಲಿ, ಆಕೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದು, ಚಿನ್ನಾಭರಣ ದೋಚಿ ಶವವನ್ನು ಕೆರೆಗೆ ಎಸೆಯಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದರು.
ಈ ಆರೋಪಗಳು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು.
🚨 ಗಂಭೀರ ತನಿಖೆ – ಮುಳುಗು ತಜ್ಞರ ಶೋಧ
ಪೊಲೀಸರು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು.
ಆಳ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡವೂ ಕೆರೆಯಲ್ಲಿ ಶವಕ್ಕಾಗಿ ಶೋಧ ಕಾರ್ಯ ನಡೆಸಿತ್ತು.
✅ ಜೀವಂತ ಪತ್ತೆ – ಪೊಲೀಸರಿಗೆ ನಿಟ್ಟುಸಿರು
ಆದರೆ ಮಹಿಳೆ ಜೀವಂತವಾಗಿ ಕುಣಿಗಲ್‌ನಲ್ಲಿ ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.ಈ ಬೆಳವಣಿಗೆಯಿಂದ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.










