ಚನ್ನರಾಯಪಟ್ಟಣ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಹಂಗಾಮಿ ಅಧ್ಯಕ್ಷ ಬಿ.ಜೆ. ಕೃಷ್ಣೇಗೌಡ ನಿಧನ

B.J. Krishnagouda (69), interim president of Hemavati Cooperative Sugar Factory in Channarayapatna taluk, passed away on Tuesday.

ಚನ್ನರಾಯಪಟ್ಟಣ: ತಾಲ್ಲೂಕಿನ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಹಂಗಾಮಿ ಅಧ್ಯಕ್ಷ ಬಿ.ಜೆ.ಕೃಷ್ಣೇಗೌಡ(69) ಮಂಗಳವಾರ ನಿಧನರಾಗಿದ್ದಾರೆ.

ಸುಮಾರು 10 ವರ್ಷಗಳ ಕಾಲ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನಿರ್ದೇಶಕರಾಗಿ ಮತ್ತು ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಬರಗೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಬರಗೂರು ಹ್ಯಾಂಡ್ ಪೋಸ್ಟ್ ಸಮೀಪ ಇರುವ ತೋಟದಲ್ಲಿ ಬುಧವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

B.J. Krishnagouda (69), interim president of Hemavati Cooperative Sugar Factory in Channarayapatna taluk, passed away on Tuesday.