ಚನ್ನರಾಯಪಟ್ಟಣ: ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣದ ವತಿಯಿಂದ ಬಾಹುಬಲಿ ಆಸ್ಪತ್ರೆ, ಶ್ರವಣಬೆಳಗೊಳದಲ್ಲಿ ನಾರಾಯಣ ಆಸ್ಪತ್ರೆ, ಮೈಸೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದ ಉದ್ಘಾಟನೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಚೇರ್ಮನ್ ಭರತ್ ಕುಮಾರ್ ಹೆಚ್. ಜಿ ಹಾಗೂ ಬಾಹುಬಲಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪೂರ್ಣಿಮಾ ನೆರವೇರಿಸಿದರು. ಹೆಚ್. ಜಿ. ಭರತ್ ಕುಮಾರ್ ರವರು ಮಾತನಾಡಿ ನಮ್ಮ ದೇಶಕ್ಕೆ ರೈತನು ಅನ್ನದಾತ ಎಂದು ಭಾವಿಸುತ್ತಾರೆ. ಕಾರಣ ರೈತ ತಾನು ಬೆಳೆದ ಶುದ್ಧ ದವಸ ಧಾನ್ಯ ಹಾಗೂ ಆಹಾರ ಸಾಮಗ್ರಿಗಳನ್ನು ಮನುಜ ಕುಲಕ್ಕೆ ನೀಡುವ ಪರಿಶುದ್ಧ ಮನಸ್ಸು ಹೊಂದಿರುವ ಏಕೈಕ ವ್ಯಕ್ತಿ, ಇಂದು ಕೋಟ್ಯಂತರ ಜನರಿಗೆ ಅನ್ನ ನೀಡುವ ಅನ್ನದಾತ, ಭೂಮಿ ತಾಯಿಗೆ ಇಬ್ಬರು ಮಕ್ಕಳು ಮೊದಲನೆ ಯವರು ರೈತ, ಮತ್ತೊಬ್ಬರು ಯೋಧ, ರೈತ ತಾನು ಬೆಳೆಯೋ ಬೆಳೆಯಿಂದ ಲಕ್ಷಾಂತರ ಕುಟುಂಬಕ್ಕೆ ಅನ್ನದಾತನಾಗುತ್ತಾನೆ.
ಸೈನಿಕ ತನ್ನ ಕುಟುಂಬವನ್ನು ದೂರ ಇಟ್ಟು ಇಡೀ ದೇಶವೇ ತನ್ನ ಕುಟುಂಬ ಎಂದು ಭಾವಿಸಿ ದೇಶ ಸೇವೆ ಮಾಡುತ್ತಾರೆ, ಆದಕಾರಣ ಭೂಮಿ ತಾಯಿಯ ನೆಚ್ಚಿನ ಮಕ್ಕಳೆಂದರೆ ರೈತ ಹಾಗೂ ಸೈನಿಕ ಎಂದು ಹೇಳಲು ಭಾವಿಸುತ್ತೇನೆ.
ಇಂದು ಎಷ್ಟೋ ಗ್ರಾಮಗಳಲ್ಲಿ ರೈತಪಿ ವರ್ಗದವರು ತುರ್ತು ಚಿಕಿತ್ಸೆ ಅಗತ್ಯ ಬರುವವರೆಗೂ ಆರೋಗ್ಯದ ಬಗ್ಗೆ ಗಮನಹರಿಸುವುದಿಲ್ಲ ಆದಕಾರಣ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ಹೆಚ್ಚು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ.
ಇಂದು ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ಬಿಪಿ ಶುಗರ್, ಶ್ವಾಸಕೋಶ ಸಮಸ್ಯೆ ಹಾಗೂ ಇತರೆ ಕಾಯಿಲೆಗಳಿಗೆ ಉಚಿತ ವೈದ್ಯಕೀಯ ಸೇವೆಗಳು ಹಾಗೂ ಆರೋಗ್ಯ ತಪಾಸಣೆಯನ್ನು ನಡೆಸುತ್ತಿದ್ದೇವೆ, ಹೆಚ್ಚಿನ ರೀತಿ ಸಾರ್ವಜನಿಕರು ಈ ಶಿಬಿರದ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಡಾ. ಪೂರ್ಣಿಮಾ ಮಾತನಾಡಿ ಗ್ರಾಮೀಣ ಭಾಗಕ್ಕೆ ಆರೋಗ್ಯ ತಪಾಸಣಾ ಶಿಬಿರವು ತುಂಬಾ ಅವಶ್ಯಕ ಕಾರಣ ಹೆಚ್ಚು ಗ್ರಾಮೀಣ ಭಾಗದ ರೈತಪಿ ವರ್ಗದವರು ಆರೋಗ್ಯದ ಬಗ್ಗೆ ನಿರ್ಲಕ್ಷ ತೋರುತ್ತಾರೆ ಆದ ಕಾರಣ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಬಾಹುಬಲಿ ಆಸ್ಪತ್ರೆಯಲ್ಲಿ ಆವರಣದಲ್ಲಿ ಇಂದು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೩೧೮ಕ್ಕೂ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು ಹಾಗೂ ೩೮ ಸಾರ್ವಜನಿಕರು ರಕ್ತದಾನ ಮಾಡಿದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಜಬಿವುಲ್ಲಾ ಬೇಗ್, ಖಜಾಂಚಿ ಸಿ. ಎಸ್. ಕಿಶೋರ್ ಕುಮಾರ್, ಡಾ. ಮಾನಸ, ಡಾ.ಜೀವನ್, ಉದಯ ಶಂಕರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.










