ಹಾಸನ : ಶಿಕ್ಷಕಿ ಸೇರಿ ಏಳು ಜನರ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಎರಡು ನಾಯಿಗಳನ್ನು ಹೊಡೆದು ಕೊಂದಿರುವ ಘಟನೆ ಬೇಲೂರು ಪಟ್ಟಣದ ನೆಹರೂ ನಗರದಲ್ಲಿ ನಡೆದಿದೆ.
ಈ ಎರಡು ಬೀದಿ ನಾಯಿಗಳು ಶಿಕ್ಷಕಿ ಚಿಕ್ಕಮ್ಮ, ಸಚಿನ್, ಪೃಥ್ವಿ, ಧರ್ಮಯ್ಯ ಹಾಗೂ ಬಾಲಕನಿಗೆ ಕಚ್ಚಿದ್ದವು.
ಅಲ್ಲದೇ ಘಟನೆ ನಡೆದ ಸ್ಥಳದಲ್ಲೇ ಬೀದಿ ನಾಯಿಗಳು ಓಡಾಡುತ್ತಿದ್ದವು. ಹೀಗಾಗಿ ಮನುಷ್ಯರ ಮೇಲೆ ಮತ್ತೆ ದಾಳಿ ಮಾಡುವ ಆತಂಕದಿಂದ ಸಾರ್ವಜನಿಕರು ಈ ನಾಯಿಗಳನ್ನು ಸಾಯಿಸಿದ್ದಾರೆ.










