ಸಕಲೇಶಪುರ: ಪುರಸಭೆ ಕಚೇರಿಯ ದಾಖಲೆಗಳಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ.
24/10/ 2025 ರಂದು ಕುಶಾಲನಗರ ಬಡಾವಣೆಯ ನಿವಾಸಿ ನಿಂಗರಾಜು ಬಿನ್ ಲಕ್ಷ್ಮೇಗೌಡ ಎಂಬಾತನು ಸಕಲೇಶಪುರ ಪುರಸಭೆ ಕಚೇರಿಗೆ ನುಗ್ಗಿ ಅಲ್ಲಿ ಸಂಗ್ರಹವಾಗಿದ್ದ ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಿಂದ ಕಚೇರಿಯಲ್ಲಿ ಕೆಲ ಕ್ಷಣಗಳ ಕಾಲಗೊಂದಲ ಉಂಟಾದರೂ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸಿದ್ದು, ದೊಡ್ಡ ಅನಾಹುತ ತಪ್ಪಿದೆ.
ಈ ಕುರಿತು ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಪೊಲೀಸ್ ಇನ್ಸ್ಪೆಕ್ಟರ್ ವಿ.ಸಿ. ವನರಾಜು ಅವರ ನೇತೃತ್ವದ ತಂಡ ವೇಗದ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ. ಘಟನೆಯ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.










