ಬೇಲೂರು: ಸಾಲಭಾರದಿಂದ ಮನನೊಂದು ರೈತ ಆತ್ಮಹತ್ಯೆ; ಜಮೀನು ಮಾರಾಟಕ್ಕೂ ತೀರದ ಸಾಲ

An incident has taken place in Kattesomanahalli village of the taluk where a man, upset over the debt he owed despite selling his land, hanged himself.

ಬೇಲೂರು: ಜಮೀನು ಮಾರಾಟ ಮಾಡಿದರೂ ಸಾಲ ತೀರದ ಹಿನ್ನಲೆಯಲ್ಲಿ ಮನನೊಂದ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ಕಟ್ಟೆಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆ.ಜೆ.ರಮೇಶ್‌ ಮೃತರು. ಕೃಷಿಗಾಗಿ ಸುಮಾರು 6 ಲಕ್ಷ ರೂ. ಬ್ಯಾಂಕ್‌ ಹಾಗು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಭಾನುವಾರ ಬೆಳಿಗ್ಗೆ ತಮ ಜಮೀನು ಪಕ್ಕದ ತೇಗದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.

10 ವರ್ಷಗಳ ಹಿಂದೆ ಗೋಣಿಸೋಮನಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ಹೆಂಡತಿ ಹೆಸರಿನಲ್ಲಿ 2 ಲಕ್ಷ ರೂ. ಹಾಗು ತಮ ಹೆಸರಿನಲ್ಲಿ 4 ಲಕ್ಷ ರೂ. ಸಾಲ ಪಡೆದಿದ್ದರು.

ಬ್ಯಾಂಕ್‌ನವರು ಮನೆ ಜಪ್ತಿಗೆ ಬಂದಿದ್ದರಿಂದ ತಮ್ಮ ಪಾಲಿನ ಜಮೀನನ್ನು 8 ಲಕ್ಷ ರೂ.ಗೆ ಮಾರಾಟ ಮಾಡಿ ಬ್ಯಾಂಕ್‌ ಹಾಗು ಸ್ವಲ್ಪ ಕೈ ಸಾಲ ತೀರಿಸಿದ್ದರು.

ಇಷ್ಟು ಮಾತ್ರವಲ್ಲದೇ 20 ಲಕ್ಷ ರೂ. ಕೈ ಸಾಲ ಹಾಗು ಹಳೇಬೀಡು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಚಿನ್ನಾಭರಣ ಗಿರವಿ ಇಟ್ಟಿದ್ದರು. ಬೆಳೆ ಕೈ ಕೊಟ್ಟ ಹಿನ್ನಲೆಯಲ್ಲಿ ಜಿಗುಪ್ಸೆಗೊಂಡು ಆತಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.