19.5 C
Munich
Home ಕ್ರೈಮ್‌ ಹಾಸನ: ನಿಗೂಢ ಸ್ಫೋಟ – ದಂಪತಿಗೆ ತೀವ್ರ ಗಾಯ, ಮಕ್ಕಳು ಪಾರು,‌ ಮನೆ ಗೋಡೆ ಛಿದ್ರ

ಹಾಸನ: ನಿಗೂಢ ಸ್ಫೋಟ – ದಂಪತಿಗೆ ತೀವ್ರ ಗಾಯ, ಮಕ್ಕಳು ಪಾರು,‌ ಮನೆ ಗೋಡೆ ಛಿದ್ರ

A mysterious explosion in a residential house in Old Alur, on the outskirts of Alur town, left a couple seriously injured and the walls and belongings of the house shattered, causing concern among locals.

ಹಾಸನ: ಆಲೂರು ಪಟ್ಟಣ ಹೊರವಲಯದ ಹಳೆ ಆಲೂರಿನಲ್ಲಿ ವಾಸದ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡು ಮನೆ ಗೋಡೆ, ವಸ್ತುಗಳು ಛಿದ್ರವಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ನಿನ್ನೆ ರಾತ್ರಿ ಸಂಭವಿಸಿದ ಈ ಘಟನೆಯಲ್ಲಿ ಮನೆಯಲ್ಲಿ ವಾಸಿಸುತ್ತಿದ್ದ ಸುದರ್ಶನ್ ಆಚಾರ್ (32) ಹಾಗೂ ಪತ್ನಿ ಕಾವ್ಯ (27) ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಪುಟ್ಟ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಗೊಂಡಿರುವ ದಂಪತಿ

ಸ್ಫೋಟದ ರಭಸಕ್ಕೆ ಮನೆಯಲ್ಲಿ ಇದ್ದ ವಸ್ತುಗಳು ಸಂಪೂರ್ಣ  ಹಾನಿಗೊಳಗಾಗಿವೆ. ತೀವ್ರ ಗಾಯಗೊಂಡ ದಂಪತಿಯನ್ನು ಮೊದಲು ಆಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಬಳಿಕ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಪೊಲೀಸ್ ತನಿಖೆ:

ಸ್ಫೋಟದ ಕಾರಣ ಇನ್ನೂ ಪತ್ತೆಯಾಗಿಲ್ಲ. ಇದು ಗ್ಯಾಸ್ ಸೋರಿಕೆ ಪರಿಣಾಮವೇ ಅಥವಾ ಬೇರೆ ಯಾವುದೋ ಕಾರಣದಿಂದ ಸಂಭವಿಸಿರುವುದೇ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ಈ ಅಕಸ್ಮಿಕ ಸ್ಫೋಟದಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದಂಪತಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

 ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.instagram.com/reel/DPMbCQiAgcV/?igsh=ZTJwdXB2M29lM3lk

 

error: Content is protected !!