15.2 C
Munich
Home ಕ್ರೈಮ್‌ ಹಾಸನ: ವಾಕಿಂಗ್ ಹೋಗಿದ್ದ ಕೆ.ಎಸ್.ಆರ್.ಟಿ.ಸಿ. ನೌಕರನ ಜೀವ ಬಲಿ ಪಡೆದ ವಿದ್ಯುತ್ ತಂತಿ

ಹಾಸನ: ವಾಕಿಂಗ್ ಹೋಗಿದ್ದ ಕೆ.ಎಸ್.ಆರ್.ಟಿ.ಸಿ. ನೌಕರನ ಜೀವ ಬಲಿ ಪಡೆದ ವಿದ್ಯುತ್ ತಂತಿ

ಹಾಸನ: ಬಿರುಗಾಳಿ-ಮಳೆಗೆ ತುಂಡಾಗಿ ಬಿದ್ದಿದ್ದ ಹೈ ಟೆನ್ಷನ್ ವಿದ್ಯುತ್ ತಂತಿ ತುಳಿದು ಕೆ ಎಸ್ ಆರ್ ಟಿ ಸಿ ನೌಕರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಗರ ಹೊರ ವಲಯದ ಬಿಟಿ ಕೊಪ್ಪಲಿನಲ್ಲಿ ಸಂಭವಿಸಿದೆ.

ನಂದೀಶ್ 40 ವರ್ಷ ಮೃತರು. ನೆನ್ನೆ ರಾತ್ರಿ ಭಾರಿ ಗಾಳಿ ಮಳೆಯಿಂದ 11 ಕೆವಿ. ವಿದ್ಯುತ್ ತಂತಿ ಮುರಿದು ಬಿದ್ದಿತ್ತು. ಇದರ ಅರಿವಿಲ್ಲದ ನಂದೀಶ್ ಅವರು ಬೆಳಗ್ಗೆ ವಾಕಿಂಗ್ ಗೆ ಹೋದಾಗ ಆಕಸ್ಮಿಕವಾಗಿ ತುಳಿದಿದ್ದು ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

error: Content is protected !!