19.5 C
Munich
Home News ಚನ್ನರಾಯಪಟ್ಟಣ: ಹಿರೀಸಾವೆಯಲ್ಲಿ ಸೆ.೯ರಂದು ಉಚಿತ ಆರೋಗ್ಯ ತಪಾಸಣೆ

ಚನ್ನರಾಯಪಟ್ಟಣ: ಹಿರೀಸಾವೆಯಲ್ಲಿ ಸೆ.೯ರಂದು ಉಚಿತ ಆರೋಗ್ಯ ತಪಾಸಣೆ

ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆಯಲ್ಲಿ ಆರಕ್ಷಕ ವೃತ್ತದ ವತಿಯಿಂದ ಭಾರತೀಯ ರೆಡ್ ಕ್ರಾಸ್, ನಾರಾಯಣ ಆಸ್ಪತ್ರೆ, ವಿ–ಸೆಕ್ಯೂರ್ ಕ್ವಿಕ್ ಇನ್ಷೂರೆನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಸೆ.೯ ಮಂಗಳವಾರ ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ಕಾನೂನು ಅರಿವು ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಆರಕ್ಷಕ ವೃತ್ತ ನಿರೀಕ್ಷಕ ಎಸ್. ಸಂತೋಷ್ ಭಾನುವಾರ ತಿಳಿಸಿದರು.

ಶಿಬಿರದಲ್ಲಿ ಸಾರ್ವಜನಿಕರ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ರೋಗಗಳನ್ನು ತಜ್ಞ ವೈದ್ಯರು ತಪಾಸಣೆ ನಡೆಸಿ, ಸಲಹೆ ಮತ್ತು ಔಷಧಿಗಳನ್ನು ನೀಡುವರು. ರಕ್ತದಾನಕ್ಕೆ ನೊಂದಾಯಿಸಿಕೊಂಡ ೨೫ ಜನರ ವಾಹನಗಳಿಗೆ ವಿ–ಸೆಕ್ಯೂರ್ ಕ್ವಿಕ್ ಇನ್ಷೂರೆನ್ಸ್ ಸಂಸ್ಥೆಯಿಂದ ಉಚಿತವಾಗಿ ವಾಹನ ವಿಮೆ ಮಾಡಿಕೊಡುತ್ತಾರೆ. ರಸ್ತೆ ಸುರಕ್ಷತೆ, ಮಾದಕ ದ್ರವ್ಯ ನಿಷೇಧ, ಪೋಕ್ಸೋ ಕಾಯ್ದೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವ, ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿಬಿರವನ್ನು ಸದಪಯೋಗಪಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ವೈದ್ಯರು, ಚಾಲಕರನ್ನು ಅಭಿನಂದಿಸಲಾಗುವುದು ಎಂದು ಅವರು ಹೇಳಿದರು.

error: Content is protected !!