ಹಾಸನ: ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆ ಪ್ರಕಟವಾಗಿದೆ. ಅತಿ ಹೆಚ್ಚಿನ ಶಿಕ್ಷೆಯನ್ನೇ ನ್ಯಾಯಾಲಯ ನೀಡಿದೆ. ಆ ಪ್ರಕರಣದ ವಿವರಗಳನ್ನು ನೋಡುತ್ತ ಹೋದರೆ, ಈ ಶಿಕ್ಷೆ ಹೆಚ್ಚಾಯಿತೆಂದು ಖಂಡಿತ ಯಾರಿಗೂ ಅನ್ನಿಸದು. ಯಾಕೆಂದರೆ ಅಪರಾಧ ಅಷ್ಟು ಗುರುತರವಾಗಿದೆ.
ಶಿಕ್ಷೆಯ ಪ್ರಮಾಣವನ್ನು ಕಡಿಮೆಮಾಡಿ ಎಂದು ಯಾವರೀತಿ ಬೇಡಿಕೊಂಡರೂ ನ್ಯಾಯಾಲಯ ಅದನ್ನು ಪರಿಗಣಿಸಿಲ್ಲ.. ಯಾಕೆಂದರೆ ಆಅಪರಾಧದ ಎದುರು ಆ ಬೇಡಿಕೆಗಳೂ ಅಷ್ಟೇ ಅಸಂಬದ್ಧವಾಗಿದ್ದವು. ಹೌದು ರಾಜಕೀಯ ವಿರೋಧಿಗಳು ಚುನಾವಣಾ ಸಂದರ್ಭದಲ್ಲಿ ಈ ವಿಚಾರವನ್ನು ಬಳಸಿದ್ದಾರೆ, ಆದರೆ ಅದೇನು ಅಪರಾಧದ ಪ್ರಮಾಣವನ್ನು ಕಡಿಮೆ ಮಾಡದು.
ಪ್ರಜ್ವಲ್ ರಾಜಕೀಯಕ್ಕೆ ಬಂದಾಗ ನಿಜವಾಗಿಯೂ ಒಂದು ಹೊಸಸಂಚಲನ ಮೂಡಿತ್ತು.. ದೇವೇಗೌಡರ ಮೊಮ್ಮಗ, ಹೊಸತಲೆಮಾರಿನ ಹುಡುಗ, ಒಳ್ಳೆಯ ಇಂಗ್ಲಿಷ್ ಭಾಷಾ ಜ್ಞಾನ ಇರುವಾತ.. ದೇವೇಗೌಡರ ನಿಜವಾದ ರಾಜಕೀಯ ಉತ್ತರಾಧಿಕಾರಿ, ಇತ್ಯಾದಿ ಭಾವನೆಗಳು ಜನರಲ್ಲಿ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಇತ್ತು..
ರಾಜ್ಯಕ್ಕೆ ಕುಮಾರಣ್ಣ ಇದ್ದರೆ ದೆಹಲಿ ಪ್ರಜ್ವಲ್ ಎಂಬ ಭಾವನೆ ಇತ್ತು. ದೇವೇಗೌಡರ ರಾಜಕಾರಣದ ಬಗ್ಗೆ ಸಹಜವಾಗಿಯೇ ದೇಶದೆಲ್ಲೆಡೆ ತಕರಾರುಗಳಿವೆ. ವಿರೋಧ ಇದ್ದೇ ಇದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಅವರ ಆಡಳಿತವನ್ನು ಮೆಚ್ಚಿಕೊಳ್ಳುವವರೂ ಇದ್ದಾರೆ. ರಾಜಕಾರಣ ಎಂದರೆ ಹಾಗೇಯೇ ಅಲ್ಲವೇ ?
ಪ್ರಜ್ವಲ್ ನ ಸಂಸತ್ತಿನ ಪ್ರವೇಶ ಉತ್ತಮ ಆಯಿತು. ತೇಜಸ್ವಿ ಸೂರ್ಯ ನನ್ನು ಸಂಸತ್ತಿನಲ್ಲು ಬಾಯಿ ಮುಚ್ಚಿಸಿದ ರೀತಿ, ಮುಂದೆ ಕರ್ನಾಟಕ ಕ್ಕೆ ಒಬ್ಬ ಒಳ್ಳೆಯ ಸಂಸದ ದೊರೆಯುವ ಭರವಸೆ ಮೂಡಿತು.ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ವಿಚಾರ ತಿಳಿದುಕೊಳ್ಳುತ್ತಿದ್ದ ಬಗ್ಗೆ ಹಲವರ ಮೆಚ್ಚುಗೆಗೆ ಕಾರಣವಾಗಿತ್ತು.
ನಾನು ಪ್ರಜ್ವಲ್ ನನ್ನು ಭೇಟಿಯಾದದ್ದು ಕೇವಲ ಮೂರು ಬಾರಿ ಮಾತ್ರ. ಕಾಫಿಬೆಳೆಗಾರರ ಸಮಸ್ಯೆ ಗೆ ಆತಸ್ಪಂದಿಸಿ ವಿಚಾರ ತಿಳಿದು ಸಂಸತ್ತಿನಲ್ಲಿ ಅದನ್ನು ಪ್ರಸ್ತಾಪಿಸಿದ ಬಗ್ಗೆ ನಾನು ಬರೆದಿದ್ದೆ.ಆ ನಂತರ ನನ್ನ ಅನೇಕ ಕಿರಿಯ ಗೆಳೆಯರು “ಸರ್ ನೀವು ಅಂದುಕೊಂಡದ್ದಕ್ಕಿಂತ ತೀರ ವಿಭಿನ್ನವಾದ ಮುಖ ಆತನಿಗೆ ಇದೆ” ಎಂದು ಎಚ್ಚರಿಸಿದರು.
ನಂತರ ಯಾವ ಕಾರಣಕ್ಕೂ ಆತನನ್ನು ಬೆಂಬಲಿಸುವ ಕೆಲಸ ಮಾಡಲಿಲ್ಲ.ಇದೀಗ ಪ್ರಜ್ವಲ್ ಗೆ ಶಿಕ್ಷೆಯಾಗಿದೆ. ಮುಂದಿನ ಹಂತದ ನ್ಯಾಯಾಲಯಗಳಿವೆ ಅದು ಏನಾದರೂ ಆಗಲಿ. ಅಲ್ಲಿ ಶಿಕ್ಷೆ ಬದಲಾಗುವ ಸಂಭವ ಕಡಿಮೆ ಎಂದು ನನ್ನ ಅನಿಸಿಕೆ. ಜೊತೆಗೆ ಇನ್ನೂ ಹಲವು ಪ್ರಕರಣ ಗಳಿವೆ.ಆದರೆ ನಾನು ಹೇಳಬೇಕಿರುವುದು. ಪ್ರಜ್ವಲ್ ಗೆ ಆಗಿರುವ ಶಿಕ್ಷೆಯಲ್ಲಿ ಅವರ ಮನೆಯವರ, ಕುಟುಂಬದವರ ಪಾಲು ಎಷ್ಟು? ಎಂದು. ಮುಖ್ಯ ಮೊದಲ ಪಾಲುದಾರರು ತಂದೆತಾಯಿಗಳು, ಮಗನ ವರ್ತನೆ ಹೇಗಿದೆಯೆಂದು ಗಮನಿಸಿ ಸರಿದಾರಿಗೆ ತರುವುದೋ, ತಿದ್ದುವುದೋ, ಅಗತ್ಯ ಬಿದ್ದರೆ ಚಿಕಿತ್ಸೆ ಕೊಡಿಸುವುದೋ ಮಾಡಬೇಕಿತ್ತು. ಪ್ರಜ್ವಲ್ ನ ವರ್ತನೆಯನ್ನು ಗಮನಿಸಿದರೆ ಸಾಡಿಸ್ಟ್ ವರ್ತನೆ ಕಂಡುಬರುತ್ತದೆ. ಹಾಗಿದ್ದರೆ ಅದಕ್ಕೆ ಪ್ರಾಯಕ್ಕೆ ಬರುವ ಹೊತ್ತಿನಲ್ಲೇ ಚಿಕಿತ್ಸೆ ಅಗತ್ಯ ಇತ್ತು.
ಆದರೆ ಪಾಳೇಗಾರೀ ಪ್ರವೃತ್ತಿಯ ತಂದೆ ತಾಯಿಯರಿಗೆ ಮಗನ ವರ್ತನೆಗಳು ತಪ್ಪೆಂದು ಕಾಣುವ ಸಾಧ್ಯತೆ ಯೇ ಇರಲಿಲ್ಲ.ಇನ್ನು ಕುಟುಂಬದ ಉಳಿದವರು, ಮುಖ್ಯ ಅಜ್ಜ ಇದನ್ನು ಗಮನಿಸಬೇಕಿತ್ತು. ಆದರೆ ನಾವಿರುವುದೇ ದೇಶ@ ಆಳಲು ಮತ್ತು ನಾವಿರುವುದೇ ಹೀಗೆ ಎಂದು ತೀರ್ಮಾನಕ್ಕೆ ಬಂದವರಲ್ಲಿ ಇದನ್ನೆಲ್ಲ ನಿರೀಕ್ಷಿಸಲಾಗದು. ಅದರ ಫಲ ಇಂದಿನ ಸ್ಥಿತಿ.ಬಹುಶಃ ದೇವೇಗೌಡರು ಬಿಜೆಪಿ ಜೊತೆ ಸ್ನೇಹ ಮಾಡಿ ಇದನ್ನು ನಿಭಾಯಿಸಿಕೊಳ್ಳುತ್ತೇನೆ ಎಂದು ಕೊಂಡಿದ್ದರೋ ಏನೋ.( ಬೇಡವೆಂದರೂ ಎಸ್.ಕೃಷ್ಣ ನೆನಪಿಗೆ ಬರುತ್ತಾರೆ) ಅದೇನು ಪ್ರಯೋಜನಕ್ಕೆ ಬಂದಂತಿಲ್ಲ. ಮತ್ತು ಅದಕ್ಕೆ ಹಲವು ಆಯಾಮ ಗಳಿವೆ.
ಇಂದಿನ ಈ ತೀರ್ಪು ಸಧ್ಯಕ್ಕೆ ದೇಶದಲ್ಲಿ ಸಂಚಲನ ಮೂಡಿದೆ. ಪ್ರಜ್ವಲ್ ಜೈಲು ಸೇರಬಹುದು. ಆದರೆ ಪ್ರಜ್ಞಲ್ನಷ್ಟೇಅಥವಾ ಅದಕ್ಕಿಂತಲೂ ಹೆಚ್ಚು ಅಪರಾಧಿಗಳು ದೇಶದ ತುಂಬ ಓಡಾಡಿಕೊಂಡಿದ್ದಾರೆ. ಅಂತಹ ಕೆಲವರ ವಿರುದ್ದ ಹೋರಾಡಲು ಕೆಲವರಿಗಾದರೂ ಒಂದಷ್ಟು ಧೈರ್ಯ ಈ ಪ್ರಕರಣದಿಂದಾಗಿ ಬರಬಹುದು. ಕೊನೆಗೂ ಹೇಳುವುದಿಷ್ಟೇ ಈ ಪ್ರಕರಣ ನಮ್ಮ ನಡುವಿನ ನೂರಾರು ತಂದೆ ತಾಯಿಯರಿಗೂ ಪಾಠ. ಮತ್ತು ಎಚ್ಚರಿಕೆಯ ಸಂದೇಶವಾಗಲಿ.










