1.4 C
Munich
Home News ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ : ಸಿ.ಎನ್.ಬಾಲಕೃಷ್ಣ

ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ : ಸಿ.ಎನ್.ಬಾಲಕೃಷ್ಣ

ಬಾಗೂರು: ಒಲಂಪಿಕ್ಸ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚಿನ ಪದಕ ಗೆಲ್ಲಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ( ಹಳೆಯ) ಶಾಲಾ ಆವರಣದಲ್ಲಿ ತಾಲೂಕು ಶಿಕ್ಷಣ ಇಲಾಖೆ ವತಿಯಿಂದ ಹೋಬಳಿ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ೨೦೨೫- ೨೬ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಒಲಂಪಿಕ್ಸ್ ಸೇರಿದಂತೆ ವಿಶ್ವಮಟ್ಟದ ಕ್ರೀಡೆಗಳಲ್ಲಿ ಅಮೆರಿಕ ಜಪಾನ್ ಚೀನಾ ಸೇರಿದಂತೆ ಕೆಲವು ದೇಶಗಳು ಪ್ರತಿಷ್ಠಿತ ಕ್ರೀಡೆಗಳಲ್ಲಿ ಹೆಚ್ಚಿನ ಪದಕವನ್ನು ಗೆಲ್ಲುತ್ತಿವೆ ಅದೇ ರೀತಿ ಪದಕದ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ದೇಶದ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ಪ್ರೋತ್ಸಾಹದ ಅವಶ್ಯಕತೆ ಇದೆ ಇದಕ್ಕೆ ಸರ್ಕಾರಗಳು ಕ್ರೀಡಾ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು

.
ಕ್ರೀಡೆಗಳಲ್ಲಿ ಗೆಲುವು ಸೋಲು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಕೇವಲ ಗೆಲುವನ್ನೇ ಮಾನದಂಡವಾಗಿ ಇಟ್ಟುಕೊಂಡು ಸ್ಪರ್ಧೆ ಮಾಡಬಾರದು ಸೋತ ಜಾಗದಲ್ಲೇ ಗೆಲುವನ್ನು ಹುಡುಕಬೇಕು ಕ್ರೀಡಾಪಟುಗಳು  ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎನ್ ದೀಪ ಮಾತನಾಡಿದರು.
ಹೋಬಳಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಕೂಟಕ್ಕೆ ಹಳೆಯ ವಿದ್ಯಾರ್ಥಿಗಳು ಮತ್ತು ಬಾಗೂರು ಯುವಕ ಬಳಗ ಹೆಚ್ಚಿನ ಸಹಕಾರ ನೀಡಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಕ್ರೀಡಾಧಿಕಾರಿ ಆನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ ಎಚ್ ಶಿವಣ್ಣ, ಬಾಗೂರು ಗ್ರಾಪಂ ಅಧ್ಯಕ್ಷ ಕೆಂಪೇಗೌಡ, ಉದ್ಯಮಿಗಳಾದ ಭುವನಹಳ್ಳಿ ಯೋಗೇಶ್, ಮರುನಹಳ್ಳಿ ದೇವರಾಜ್, ಮುಖಂಡರಾದ ಓಬಳಾಪುರ ಬಸವರಾಜ್, ರಾಮಚಂದ್ರು, ಶಿವಶಂಕರ ಕುಂಟೆ, ಮನು, ಸ್ಟುಡಿಯೋ ರಘು, ಕಾಂತರಾಜ್, ಹುಲಿಕೆರೆ ಸಂಪತ್ ಕುಮಾರ್, ಮಲ್ಲೇಶ್, ಇಸಿಓ ಜೈಪ್ರಕಾಶ್, ಬಿ ಆರ್ ಪಿ ಶಾಂತರಾಜ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕರುಗಳಾದ ಲತೀಫ್, ಮಂಜುಳಾ, ಸೇರಿದಂತೆ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಹಾಗೂ ಮಕ್ಕಳ ಹಾಜರಿದ್ದರು.

error: Content is protected !!