ಶಿವಾನಂದ ತಗಡೂರು ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ

ಬೆಂಗಳೂರು:  ಬಸವನಗುಡಿಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ಖ್ಯಾತ ಚಿತ್ರನಟಿ ಪ್ರಿಯಾಂಕ ಉಪೇಂದ್ರ ಅವರು ಪ್ರದಾನ ಮಾಡಿದರು.

ಬಾಗೂರು ನವಿಲೆ ಹೋರಾಟದಿಂದ ಪ್ರಾರಂಭಗೊಂಡ ತಗಡೂರು ಅವರ ಹೋರಾಟ, ಪತ್ರಕರ್ತರಾಗಿ ರೂಪುಗೊಂಡಿದ್ದು ಮತ್ತು ಪತ್ರಕರ್ತರ ಸಂಘಟನೆಯ ಮೂಲಕ ಸಮುದಾಯಕ್ಕೆ ಹಲವು ಸೌಲಭ್ಯ ಕೊಡಿಸುವ ಹೋರಾಟ ಮುಂದುವರಿಸಿರುವುದನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.

ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಅಧ್ಯಕ್ಷ ಸಾ.ರ.ಗೋವಿಂದು, ಬಿಎಂಕೆ ಸೇವಾ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಜಿ.ಎಸ್.ಲತಾ ಜೈಪ್ರಕಾಶ್, ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಹಾಜರಿದ್ದರು.