ಹಾಸನ (kannadapost.com): ಜಿಲ್ಲೆಯ ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ ಚುನಾವಣೆ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯ ಎಲ್ಲಾ 38 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.
ರಾಜ್ಯಪಾಲರ ಆದೇಶಾನುಸಾರ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಸರ್ಕಾರದ ಪದನಿಮಿತ್ತ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಹೆಚ್. ಅವರ ಸಹಿಯೊಂದಿಗೆ ಈ ಗೆಜೆಟ್ ಅಧಿಸೂಚನೆ ಹೊರಬಿದ್ದಿದ್ದು, ಗ್ರಾಮೀಣ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಮಹಿಳೆಯರಿಗೆ ಸಿಂಹಪಾಲು:
ಪ್ರಕಟಿತ ಮೀಸಲಾತಿಯಲ್ಲಿ ಮಹಿಳೆಯರಿಗೆ ಗಣನೀಯ ಪ್ರಾತಿನಿಧ್ಯ ದೊರೆತಿದೆ. ಒಟ್ಟು 38 ಕ್ಷೇತ್ರಗಳಲ್ಲಿ ಸಾಮಾನ್ಯ (ಮಹಿಳೆ), ಹಿಂದುಳಿದ ವರ್ಗ (ಮಹಿಳೆ) ಹಾಗೂ ಅನುಸೂಚಿತ ಜಾತಿ (ಮಹಿಳೆ) ಸೇರಿದಂತೆ 19ಕ್ಕೂ ಹೆಚ್ಚು ಕ್ಷೇತ್ರಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿವೆ.
ಕ್ಷೇತ್ರಗಳ ಮೀಸಲಾತಿ ವಿವರ:
|
ಕ್ರ.ಸಂ |
ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ ವಿವರ |
|---|---|---|
|
1 |
1-ಪಾಳ್ಯ |
ಅನುಸೂಚಿತ ಜಾತಿ |
|
2 |
2-ಮಗ್ಗೆ |
ಸಾಮಾನ್ಯ (ಮಹಿಳೆ) |
|
3 |
3-ಹೊನ್ನವಳ್ಳಿ |
ಸಾಮಾನ್ಯ |
|
4 |
4-ಮಲ್ಲಿಪಟ್ಟಣ |
ಸಾಮಾನ್ಯ (ಮಹಿಳೆ) |
|
5 |
5-ದೊಡ್ಡಮಗ್ಗೆ |
ಅನುಸೂಚಿತ ಜಾತಿ (ಮಹಿಳೆ) |
|
6 |
6-ಕೊಣನೂರು |
ಹಿಂದುಳಿದ “ಅ” ವರ್ಗ |
|
7 |
7-ರಾಮನಾಥಪುರ |
ಸಾಮಾನ್ಯ (ಮಹಿಳೆ) |
|
8 |
8-ಜಿ.ಸಿ ಪುರ (ಅಗ್ಗುಂದ) |
ಅನುಸೂಚಿತ ಜಾತಿ |
|
9 |
9-ಹಾರನಹಳ್ಳಿ |
ಸಾಮಾನ್ಯ (ಮಹಿಳೆ) |
|
10 |
10-ದೊಡ್ಡಮೇಟಿಕುರ್ಕೆ (ಕಣಕಟ್ಟೆ) |
ಹಿಂದುಳಿದ “ಬ” ವರ್ಗ (ಮಹಿಳೆ) |
|
11 |
11-ಕೆಂಕೆರೆ (ಗಂಡಸಿ) |
ಹಿಂದುಳಿದ “ಅ” ವರ್ಗ (ಮಹಿಳೆ) |
|
12 |
12-ಬಾಗೇಶಪುರ |
ಸಾಮಾನ್ಯ |
|
13 |
13-ಹಿರಿಯೂರು |
ಹಿಂದುಳಿದ “ಅ” ವರ್ಗ |
|
14 |
14-ಜಾವಗಲ್ |
ಸಾಮಾನ್ಯ |
|
15 |
15-ಅಡಗೂರು |
ಸಾಮಾನ್ಯ |
|
16 |
16-ಹಳೇಬೀಡು |
ಸಾಮಾನ್ಯ |
|
17 |
17-ಇಬ್ಬೀಡು |
ಅನುಸೂಚಿತ ಜಾತಿ (ಮಹಿಳೆ) |
|
18 |
18-ನಾಗೇನಹಳ್ಳಿ |
ಸಾಮಾನ್ಯ (ಮಹಿಳೆ) |
|
19 |
19-ಅರೇಹಳ್ಳಿ |
ಸಾಮಾನ್ಯ (ಮಹಿಳೆ) |
|
20 |
20-ನವಿಲೆ (ಬಾಗೂರು) |
ಹಿಂದುಳಿದ “ಅ” ವರ್ಗ |
|
21 |
21-ನುಗ್ಗೇಹಳ್ಳಿ |
ಅನುಸೂಚಿತ ಪಂಗಡ |
|
22 |
22-ಅನೇಕೆರೆ (ದಂಡಿಗನಹಳ್ಳಿ) |
ಸಾಮಾನ್ಯ (ಮಹಿಳೆ) |
|
23 |
23-ದಿಂಡಗೂರು (ಡಿ.ಕಾಳೇನಹಳ್ಳಿ) |
ಸಾಮಾನ್ಯ |
|
24 |
24-ಜಂಬೂರು (ಗೌಡಗೆರೆ) |
ಅನುಸೂಚಿತ ಜಾತಿ (ಮಹಿಳೆ) |
|
25 |
25-ಶ್ರವಣಬೆಳಗೊಳ |
ಹಿಂದುಳಿದ “ಅ” ವರ್ಗ |
|
26 |
26-ಹಿರೀಸಾವೆ |
ಹಿಂದುಳಿದ “ಅ” ವರ್ಗ (ಮಹಿಳೆ) |
|
27 |
27-ಕಟ್ಟಾಯ-ಗೊರೂರು |
ಸಾಮಾನ್ಯ (ಮಹಿಳೆ) |
|
28 |
28-ಸಾಲಗಾಮೆ |
ಅನುಸೂಚಿತ ಜಾತಿ (ಮಹಿಳೆ) |
|
29 |
29-ಮೊಸಳೆ ಹೊಸಹಳ್ಳಿ |
ಸಾಮಾನ್ಯ |
|
30 |
30-ಶಾಂತಿಗ್ರಾಮ |
ಸಾಮಾನ್ಯ (ಮಹಿಳೆ) |
|
31 |
31-ದುದ್ದ |
ಸಾಮಾನ್ಯ (ಮಹಿಳೆ) |
|
32 |
32-ಹಳೇಕೋಟೆ |
ಹಿಂದುಳಿದ “ಬ” ವರ್ಗ |
|
33 |
33-ಮೂಡಲಹಿಪ್ಪೆ |
ಅನುಸೂಚಿತ ಜಾತಿ |
|
34 |
34-ನಿಡುವಣಿ |
ಸಾಮಾನ್ಯ |
|
35 |
35-ಹಳ್ಳಿಮೈಸೂರು |
ಹಿಂದುಳಿದ “ಅ” ವರ್ಗ (ಮಹಿಳೆ) |
|
36 |
36-ಬೆಳಗೋಡು |
ಹಿಂದುಳಿದ “ಅ” ವರ್ಗ (ಮಹಿಳೆ) |
|
37 |
37-ಹಾನುಬಾಳು |
ಅನುಸೂಚಿತ ಜಾತಿ |
|
38 |
38-ಯಸಳೂರು |
ಸಾಮಾನ್ಯ |












