ಹಾಸನ (kannadapost.com): ರಾಜ್ಯದಲ್ಲಿಯೇ ಬರೋಬ್ಬರಿ 167 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಹಾಗೂ ‘ಮೂಗುತಿ ಸುಂದರಿ’ ಎಂದೇ ಖ್ಯಾತಿ ಪಡೆದಿರುವ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ಅಮ್ಮನವರ ದರ್ಶನವನ್ನು ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಭಾನುವಾರ ಸಂಜೆ ಪಡೆದರು.
ಭಾದ್ರಪದ ಮಾಸದ ತದಿಗೆಯಂದು ನೂತನ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಕ್ತಿ ದೇವತೆ, ಮೂಲ ಶ್ರೀ ಸ್ವರ್ಣ ಗೌರಿ ಅಮ್ಮನವರ ಸನ್ನಿಧಿಗೆ ಆಗಮಿಸಿದ ಸಚಿವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಾಡಿಗೆ ಹಾಗೂ ರಾಜ್ಯದ ಸಮಸ್ತ ಜನತೆಗೆ ಒಳ್ಳೆಯದಾಗಲಿ ಎಂದು ದೇವಿಯಲ್ಲಿ ಅತ್ಯಂತ ಭಕ್ತಿಭಾವದಿಂದ ಪ್ರಾರ್ಥಿಸಿದರು.
ದೇವಾಲಯದ ನೂತನ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ದೇವಿಯ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತಸಾಗರದ ಬಗ್ಗೆ ಮಾಹಿತಿ ಪಡೆದುಕೊಂಡರು.
ಉಪಸ್ಥಿತರಿದ್ದ ಗಣ್ಯರು ಹಾಗೂ ಅಧಿಕಾರಿಗಳು:
ಸಚಿವರ ಭೇಟಿಯ ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್, ತಹಸೀಲ್ದಾರ್ ಎಂ.ಜಿ. ಸಂತೋಷ್, ಗ್ರಾಮಾಂತರ ವೃತ್ತ ನಿರೀಕ್ಷಕ (ಸಿಪಿಐ) ಅರುಣ್ ಕುಮಾರ್, ಬಾಣಾವರ ಪಿಎಸ್‌ಐ ಸುರೇಶ್ ಉಪಸ್ಥಿತರಿದ್ದರು.
ಇವರೊಂದಿಗೆ ಸ್ಥಳೀಯ ಮುಖಂಡರಾದ ರಾಂಪುರ ಗ್ರಾಮೀಣ ಮಾಜಿ ಅಧ್ಯಕ್ಷ ಸುರೇಶ್, ಡಿ.ಎಂ. ಕುರ್ಕೆ ಸುರೇಶ್, ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್ ಹಾಗೂ ಪ್ರಮುಖರಾದ ಎಂ.ಸಿ. ನಟರಾಜ್, ಮಾಡಾಳು ಎಸ್.ಎಂ., ಮಳ್ಳಿ, ಎಂ.ವಿ. ಸ್ವಾಮಿ, ಚಂದ್ರಪ್ಪ, ಕಟ್ನಿಮ್ಮಯ್ಯ, ದಾಸಪ್ಪ ಸೇರಿದಂತೆ ದೇವಾಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಹಾಜರಿದ್ದರು.












