13.2 C
Munich
Home News Mysore:ಮೈಸೂರು:ಚುನಾವಣಾ ರಾಜಕೀಯಕ್ಕೆ ಹೆಚ್ .ವಿಶ್ವನಾಥ್ ಗುಡ್ ಬೈ

Mysore:ಮೈಸೂರು:ಚುನಾವಣಾ ರಾಜಕೀಯಕ್ಕೆ ಹೆಚ್ .ವಿಶ್ವನಾಥ್ ಗುಡ್ ಬೈ

ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ದೃಶ್ಯ
ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಘೋಷಿಸಿದ ಬಿಜೆಪಿ ಎಂಎಲ್‌ಸಿ ಹೆಚ್. ವಿಶ್ವನಾಥ್

Mysore ಬಿಜೆಪಿ ವಿಧಾನ ಪರಿಷತ್ ಸದಸ್ಯ H. Vishwanath ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಘೋಷಿಸಿದ್ದಾರೆ. ಇದೇ ವೇಳೆ ಬಿಎಸ್‌ವೈ ಅಭಿಮಾನೋತ್ಸವದ ವಿರುದ್ಧ ಕಿಡಿಕಾರಿದ್ದು, ಪೋಕ್ಸೋ ಪ್ರಕರಣ ಗಂಭೀರ ವಿಷಯ ಎಂದು ಹೇಳಿದ್ದಾರೆ.

ಮೈಸೂರು,ಮೇ,7,2026,(www.kannadapost.com): ರಾಜಕೀಯ ವಲಯದಲ್ಲಿ ಹಳ್ಳಿಹಕ್ಕಿ ಎಂದೇ ಗುರುತಿಸಿಕೊಂಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಮಾತನಾಡರುವ ಎಎಲ್ ಸಿ ಹೆಚ್. ವಿಶ್ವನಾಥ್, ಮುಂಬರುವ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಬಿಎಸ್ ವೈ ಅಭಿಮಾನೋತ್ಸವ ಕುರಿತು ಪ್ರತಿಕ್ರಿಯಿಸಿರುವ ಹೆಚ್. ವಿಶ್ವನಾಥ್, ಪೋಕ್ಸೋ ಪ್ರಕರಣದ ಆರೋಪಕ್ಕೆ ಬಿಎಸ್ ವೈ ಗುರಿಯಾಗಿದ್ದಾರೆ.

ಇದು ಗಂಭೀರ ಪ್ರಕರಣವಾಗಿದೆ. ಇದೀಗ ಬಿಎಸ್ ವೈ ಅಭಿಮಾನೋತ್ಸವಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಎರಡೂ ಪ್ರಕರಣಗಳು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ವಕೀಲ ಸಿದ್ದರಾಮಯ್ಯಗೆ ಇದೆಲ್ಲಾ ಗೊತ್ತಿಲ್ಲವೇ? ಎಂದು ಕಿಡಿಕಾರಿದ್ದಾರೆ.

error: Content is protected !!