14.1 C
Munich
Home ಜಿಲ್ಲೆ Hassan:ಹಾಸನದ ಮಂಥನ್‌ಗೆ 597 ಅಂಕ: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್

Hassan:ಹಾಸನದ ಮಂಥನ್‌ಗೆ 597 ಅಂಕ: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್

ಹಾಸನ, ಮೇ 1(kannadapost.com): ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮರುಮೌಲ್ಯಮಾಪನದ ನಂತರ ಹಾಸನ ಮೂಲದ ಪ್ರತಿಭಾವಂತ ವಿದ್ಯಾರ್ಥಿ ಮಂಥನ್ ಎಸ್. ಅವರು 600ರಲ್ಲಿ 597 ಅಂಕಗಳನ್ನು ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ 4ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.

ಬೆಂಗಳೂರು ನಗರದಲ್ಲಿರುವ Christ Junior College ನಲ್ಲಿ ವ್ಯಾಸಂಗ ಮಾಡುತ್ತಿರುವ ಮಂಥನ್ ಅವರು, ತಮ್ಮ ಆರಂಭಿಕ ಫಲಿತಾಂಶದ ನಂತರ ವಿಶ್ವಾಸದಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ.

ಮಂಥನ್ ಅವರು ಶರತ್ ಬಿ.ಪಿ. ಹಾಗೂ ಡಾ. ಕಾವ್ಯ ಎಚ್.ಎಂ. ದಂಪತಿಯ ಪುತ್ರರಾಗಿದ್ದು, ಓದಿನ ಮೇಲಿನ ನಿರಂತರ ಶ್ರದ್ಧೆ ಮತ್ತು ಶಿಸ್ತಿನ ಜೀವನ ಶೈಲಿಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸಾಧನೆಗೆ ಪೋಷಕರು, ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಹಾಸನ ಜಿಲ್ಲೆಯ ಜನತೆ ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

Hassan’s Manthan Scores 597 Marks, Secures 4th Rank in PUC Revaluation

Hassan, May 1: In an impressive academic achievement, Hassan-based student Manthan S. has secured 597 out of 600 marks in the II PUC Commerce stream after revaluation, earning the 4th rank in Karnataka.

A student of Christ Junior College, Bengaluru, Manthan had applied for revaluation with confidence after his initial results. The revised marks now reflect his true academic potential.

He is the son of Sharath B.P. and Dr. Kavya H.M. His success is attributed to consistent dedication, discipline, and focused preparation.

Parents, faculty members, and the people of Hassan district have congratulated him and wished him success in his future academic journey.

error: Content is protected !!