- ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಮಧ್ಯಪ್ರದೇಶದ ಸೋನಮ್ ರಘುವಂಶಿಗೆ ಜಾಮೀನು ದೊರೆತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಕೆಯ ಸಹೋದರ, ‘ನಾವು ಅವಳನ್ನು ಅವಳ ವಿಧಿಗೆ ಬಿಟ್ಟಿದ್ದೇವೆ’ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಪೂರ್ಣ ವಿವರಗಳಿಗೆ ಕನ್ನಡ ಪೋಸ್ಟ್ ಓದಿ.
Madyapradesh|ಮಧ್ಯಪ್ರದೇಶ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದ (Meghalaya honeymoon murder case) ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ (Sonam Raghuvanshi) ಕೊನೆಗೂ ಜಾಮೀನು ಮಂಜೂರಾಗಿದೆ. ಆದರೆ, ಜೈಲಿನಿಂದ ಹೊರಬರುತ್ತಿರುವ ಸೋನಮ್ಗೆ ಸ್ವಂತ ಕುಟುಂಬದ ಬೆಂಬಲವೇ ಇಲ್ಲದಂತಾಗಿದೆ.
ಹನಿಮೂನ್ಗೆಂದು ಹೋಗಿದ್ದಾಗ ನಡೆದ ಈ ಭೀಕರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಸೋನಮ್ಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಬೆಳವಣಿಗೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆಕೆಯ ಸಹೋದರ ತೀವ್ರ ಅಸಹಾಯಕತೆ ಹಾಗೂ ನೋವು ವ್ಯಕ್ತಪಡಿಸಿದ್ದಾರೆ.
”ಅವಳ ಪಾಡಿಗೆ ಅವಳನ್ನು ಬಿಟ್ಟಿದ್ದೇವೆ”: ಸಹೋದರಿಯ ಬಿಡುಗಡೆಯ ಬಗ್ಗೆ ಮಾತನಾಡಿದ ಆಕೆಯ ಸಹೋದರ, “ನಾವು ಅವಳನ್ನು ಅವಳ ವಿಧಿಗೆ ಬಿಟ್ಟಿದ್ದೇವೆ (We have left her to own fate)” ಎಂಬ ಅಚ್ಚರಿಯ ಹಾಗೂ ಭಾವುಕ ಹೇಳಿಕೆ ನೀಡಿದ್ದಾರೆ. ಪ್ರಕರಣದ ತೀವ್ರತೆ ಹಾಗೂ ಕುಟುಂಬಕ್ಕಾದ ಮುಜುಗರದಿಂದಾಗಿ ಕುಟುಂಬಸ್ಥರು ಸೋನಮ್ಳಿಂದ ಅಂತರ ಕಾಯ್ದುಕೊಂಡಿರುವುದು ಈ ಹೇಳಿಕೆಯಿಂದ ಸಾಬೀತಾಗಿದೆ.










