ಕ್ರೈಮ್‌ ಕಥೆಗಳ ಮೂಲಕ ಭರವಸೆಯ ಸಂದೇಶ ನೀಡುತ್ತಿರುವ ‘ಶಾಂತಂ ಪಾಪಂ’

Shantam Paapam' is no longer just a crime thriller episode. It has created a platform of hope for so many budding talents. It is feeding hundreds of families.

ವಿಭಿನ್ನ ಕಥೆ, ಸೀರೀಸ್‌ಗಳನ್ನ ವೀಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಕಲರ್ಸ್‌ ಕನ್ನಡ ವಾಹಿನಿಯದ್ದು. ಹೊಸತನದ ಪ್ರಯೋಗಗಳನ್ನ ಮಾಡಿ ಗೆದ್ದಿದೆ ಕೂಡ. ಅದರಲ್ಲಿ ಪ್ರಮುಖವಾಗಿ ನಿಲ್ಲೋದು ‘ ಶಾಂತಂ ಪಾಪಂ ’. ಕ್ರೈಮ್‌ ಥ್ರಿಲ್ಲರ್ ಸಂಚಿಕೆಗಳ ಮೂಲಕ ಜನತೆಗೆ ಮನರಂಜನೆಯ ಜೊತೆಗೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ.

ಭರವಸೆ ನೀಡಿದ ‘ಶಾಂತಂ ಪಾಪಂ’
‘ಶಾಂತಂ ಪಾಪಂ’ ಕೇವಲ ಒಂದು ಕ್ರೈಮ್‌ ಥ್ರಿಲ್ಲರ್ ಸಂಚಿಕೆಯಾಗಿ ಉಳಿದಿಲ್ಲ. ಅದೆಷ್ಟೋ ಉದಯೋನ್ಮಖ ಪ್ರತಿಭೆಗಳಿಗೆ ಭರವಸೆಯ ವೇದಿಕೆ ಸೃಷ್ಟಿಸಿದೆ. ನೂರಾರು ಕುಟುಂಬಗಳಿಗೆ ಅನ್ನ ನೀಡುತ್ತಿದೆ.

ಹೌದು, ಕ್ರೈಮ್‌ ಹೇಗೆಲ್ಲಾ ನಡೆಯುತ್ತೆ? ಜನರು ಯಾವ ರೀತಿಯಾಗಿ ಎಚ್ಚರವಹಿಸಬೇಕು? ಎಂಬ ಸಂದೇಶದ ಜೊತೆಗೆ ಸಂಚಿಕೆಗಳು ಮೂಡಿಬರುತ್ತವೆ. ಒಂದೊಂದು ಅಪರಾಧದ ಕಥೆ ಇಟ್ಕೊಂಡು ಸಂಚಿಕೆ ಸಿದ್ದ ಮಾಡಲಾಗುತ್ತೆ. ಪ್ರತಿ ಸಂಚಿಕೆಯಲ್ಲೂ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತೆ.

ನಟ-ನಟಿಯಾಗಬೇಕು ಎಂದು ಕನಸು ಹೊತ್ತು, ಅವಕಾಶಕ್ಕಾಗಿ ಅಲೆಯುತ್ತಿರುವ ಅದೆಷ್ಟೋ ಉದಯೋನ್ಮಖ ಕಲಾವಿದರಿಗೆ ತಮ್ಮ ಪ್ರತಿಭೆ ತೋರಿಸೋಕೆ ಸುವರ್ಣ ಅವಕಾಶ ‘ಶಾಂತಂ ಪಾಪಂ’. ಪ್ರತಿದಿನ ಸಂಚಿಕೆ ಪ್ರಸಾರದಿಂದ ಕಲಾವಿದರ ಜೊತೆಗೆ ತಂತ್ರಜ್ಞರಿಗೂ ಕೆಲಸ ಸಿಗುತ್ತೆ. ಇದರಿಂದ ನೂರಾರು ಕುಟುಂಬಗಳಿಗೆ ಆಸರೆ ಸಿಕ್ಕಿದೆ.

Shantam Paapam’ is no longer just a crime thriller episode. It has created a platform of hope for so many budding talents. It is feeding hundreds of families.