ಹಾಸನ: ಪ್ರಾಚೀನ ಕಲೆಯಾದ ಗಮಕ ಹಳಗನ್ನಡ ನಡುಗನ್ನಡ ಹೊಸಗನ್ನಡದ ಎಲ್ಲಾ ಕಾವ್ಯಗಳನ್ನು ಗಮಕ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
ಹಾಸನದಂತಹ ಪುಟ್ಟ ನಗರದಲ್ಲಿ ಕಳೆದ ಇಪ್ಪತ್ಮೂರು ವರ್ಷಗಳಿಂದ “ಗಮಕ ಹಬ್ಬ ಕವಿನಮನ” ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದರಿಂದ ಹಾಸನಕ್ಕೆ ” ಗಮಕ ಸಿಂಹಾಸನ” ಎಂಬ ಹೆಸರಿನ್ನಿಟ್ಟರೆ ಹೆಚ್ಚು ಔಚಿತ್ಯಪೂರ್ಣವಾಗುತ್ತದೆ ಎಂದು ಕರ್ನಾಟಕ ಗಮಕ ಕಲಾಪರಿಷತ್ತಿನ ಸಲಹಾ ಸಮಿತಿ ಸದಸ್ಯೆ ವ್ಯಾಖ್ಯಾನ ಚತುರೆ ಶಾಂತಾ ನಾಗಮಂಗಲ ತಿಳಿಸಿದರು.
ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಹಾಸನ ಜಿಲ್ಲಾ ಘಟಕ, ಸಂಸ್ಕಾರ ಭಾರತೀಯ ಕರ್ನಾಟಕ (ರಿ) ಹಾಸನ ಜಿಲ್ಲಾ ಸಮಿತಿ, ಕಟ್ಟಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ ಹಾಗೂ ಹಾಸನ ನಗರ ಗೃಹನೀರ್ಮಾಣ ಸಹಕಾರಿ ಸಂಘ. ನಿ.ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 06 ರಿಂದ 12 ರ ವರೆಗೆ ನಡೆದ” ಗಮಕ ಹಬ್ಬ ಕವಿನಮನ” ಕಾರ್ಯಕ್ರಮದ ಸಮಾರೋಪ ಭಾಷಣ ಮಾಡುತ್ತಾ ಹಾಸನದ ಜನತೆಯನ್ನು ಕಾರ್ಯಕ್ರಮದ ಮುಖ್ಯ ರೂವಾರಿ ಕರ್ನಾಟಕ ಕಲಾಶ್ರೀ ಗಣೇಶ ಉಡುಪಿ ಅವರ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿದರು.
It is a good development that all the poems of Gamaka, the ancient art of Gamaka, Old Kannada, Middle Kannada and New Kannada, are being incorporated into Gamaka programs.










