ಹಳೇಬೀಡು: ಬಂಡಿಲಕ್ಕನಕೊಪ್ಪಲು ಬಳಿ ದ್ವಾರಸಮುದ್ರ, ಕೆರೆಯ ಸಹಾಯಕ್ಕೆ ಪಿಕಪ್ ಹಾಗೂ ಸೇತುವೆ ನಿರ್ಮಿಸಲು ಸರ್ಕಾರದಿಂದ ₹150 ಲಕ್ಷ ಹಣ ಮಂಜೂರಾಗಿದೆ. ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬಿ.ಎಂ.ಸುರೇಶ್ ಹೇಳಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,
ದ್ವಾರಸಮುದ್ರ ಕೆರೆ ಕೋಡಿ ಬಿದ್ದಾಗ, ಬಂಡಿಲಕ್ಕನಕೊಪ್ಪಲು ಬಳಿ ಜಮೀನು ಜಲಾವೃತವಾಗವುದು, ಸೇತುವೆ ಮುಳುಗಿ ಜಮೀನುಗಳು ಸಂಪರ್ಕ ಇಲ್ಲವಾಗುವುದು ಮಾಮೂಲಿಯಾಗಿದೆ.
ಈ ವರ್ಷ ಚಿತ್ರದುರ್ಗದ ಮಾರಿಕಣಿವೆಗೆ ಎತ್ತಿನಹೊಳೆ ಯೋಜನೆಯ ನೀರನ್ನು ದ್ವಾರ ಸಮುದ್ರ ಕೆರೆ ಮುಖಾಂತರ ಹರಿಸಿದ್ದರಿಂದ ನೀರಿನ ಹರಿವು ಹೆಚ್ಚಾಗಿ ರೈತರು ಪರದಾಡುವಂತಾಗಿತ್ತು.
ಜಮೀನಿನಿಂದ ಫಸಲು ಸಾಗಿಸಲು, ಮೇವು ತರಲು ಕಷ್ಟವಾಗಿತ್ತು. ಮೇಯಲು ಜಾನುವಾರು, ಆಡು, ಕುರಿಗಳನ್ನು ಜಮೀನಿಗೆ ಮೇಯಿಸಲು ಕರೆದೊಯ್ಯಲು ತೊಂದರೆ ಆಗಿತ್ತು.
ಈ ಕುರಿತು ಗ್ರಾಮಸ್ಥರು ಎಐಸಿಸಿ ಸದಸ್ಯ ಹಾಗೂ ಮಾಜಿ ಸಚಿವ ಗಂಡಸಿ ಶಿವರಾಂ ಅವರನ್ನು ಸಂಪರ್ಕಿಸಿದ್ದೇವು. ಸರ್ಕಾರ, ಸಣ್ಣ ನೀರಾವರಿ ಇಲಾಖೆ ಹಾಗೂ ಸಚಿವಾಲಯದಲ್ಲಿ ಅವರು ವಿಷಯ ಪ್ರಸ್ತಾಪಿಸಿ, ಕೆಲಸ ಕಾರ್ಯಗತಗೊಳಿಸಿದರು.
ಕಾಮಗಾರಿ ಪೂರ್ಣಗೊಂಡ ನಂತರ ಅನಾದಿ ಕಾಲದ ಸಮಸ್ಯೆ ಬಗೆಹರಿದಂತಾಗುತ್ತದೆ ಎಂದು ಸುರೇಶ್ ಹೇಳಿದರು.
The government has sanctioned Rs 150 lakh to build a pickup truck and a bridge to help with the Dwarasamudra lake near Bandilakkanakoppalu, said Taluk Guarantee Implementation Committee member B.M. Suresh.










