ಅರಸೀಕೆರೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಯಶಸ್ವಿಯಾಗಿ ನಡೆದಿದ್ದು, ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಟಿ. ಆನಂದ್ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಡಾಳು ಸೊಮಶೇಖರ್ ಹಾಗೂ ಹೇಮಂತ್ ಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಎಸ್.ವಿ. ನವೀನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯದರ್ಶಿಗಳಾಗಿ ಪುಟ್ಟಪ್ಪ ಶಶಿವಾಳು ಹಾಗೂ ಟಿ.ಎ. ಸ್ವಾಮಿ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಎಂ.ಎಸ್. ನಂದೀಶ್ ಕುಮಾರ್ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ.ಎಂ. ಜಗದೀಶ್, ಜೆ.ಎನ್. ರಂಗನಾಥ್, ಜೆ.ಎಸ್. ರವಿಶಂಕರ್, ವಿ. ಸತೀಶ್, ಸೈಯದ್ ಸಾದಿಕ್, ಕೆ.ಪಿ. ವೀರಭದ್ರಚಾರ್, ಬಿ.ಎಂ. ಸತೀಶ್ ಹಾಗೂ ಎಸ್. ವಿಜಯಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಎನ್. ನಂಜುಂಡೇಗೌಡ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಜಿ. ಸ್ವರೂಪ್ ಅವರು ಸುಗಮವಾಗಿ ನಡೆಸಿಕೊಟ್ಟರು.
Arasikere: The elections for the Taluk Working Journalists’ Association were held successfully










